ಗದಗ, 23 ಆಗಸ್ಟ್ (ಹಿ.ಸ.) :
ಆ್ಯಂಕರ್ : ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾದ್ಯಂತ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಜೆಪಿ ಗದಗ ವಿಧಾನಸಭಾ ಕ್ಷೇತ್ರ(ಗದಗ ನಗರ ಮಂಡಲ ಹಾಗು ಗ್ರಾಮೀಣ ಮಂಡಲ)ದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಜರುಗಿತು.
ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಕರ್ನಾಟಕವಲ್ಲದೇ ದೇಶಾದ್ಯಂತ ಕೋಟ್ಯಾಂತರ ಭಕ್ತಾಧಿಗಳನ್ನು ಹೊಂದಿರುತ್ತದೆ. ಈ ಕ್ಷೇತ್ರಕ್ಕೆ ದಿನನಿತ್ಯ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸುತ್ತಾರೆ. ಹಿಂದೂಗಳಿಗೆ ಇದು ಪ್ರಮುಖ ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಿರುತ್ತದೆ. ಹಿಂದೂಗಳ ಧಾರ್ಮಿಕ ಭಾವನೆಯನ್ನು ಅಪಮಾನಿಸುವ ದುರುದ್ದೇಶದಿಂದ ಕೆಲವು ಕಿಡಿಗೇಡಿಗಳು ಹಾಗು ಎಡಚರರು ಸುಳ್ಳು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇದರ ಹಿಂದೆ ಹಿಂದೂಗಳ ಶ್ರದ್ಧಾ ಭಕ್ತಿಯನ್ನು ಅತ್ಯಂತ ನಿಕೃಷ್ಟವಾಗಿ ಬಿಂಬಿಸುವ ಹುನ್ನಾರವಿದೆ.
ಇಂತಹ ಕಿಡಿಗೇಡಿಗಳಿಗೆ ಕುಮ್ಮಕ್ಕು ನೀಡುವ ಷಡ್ಯಂತ್ರ್ಯವು ನಡೆದಿದೆ. ಭಾರತದ ನ್ಯಾಯ ಸಂಹಿತೆ ಅಡಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಯಾವುದೇ ಆಧಾರಗಳಿಲ್ಲದೇ ಮಾಡಿದ ಆರೋಪಕ್ಕೆ ರಾಜ್ಯ ಕಾಂಗ್ರೇಸ್ ಸರ್ಕಾರವು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಆತ ಹೇಳಿದ ಕಡೆಗಳೆಲೆಲ್ಲಾ ಗುಂಡಿಗಳನ್ನು ತೋಡಿದೆ. ಆದರೆ, ಈ ಅನಾಮಿಕನ ಹಿಂದಿರುವ ದುಷ್ಠ ವ್ಯಕ್ತಿಗಳು ಯಾರು? ಮತ್ತು ಅವರು ಮಾಡುತ್ತಿರುವ ಸಂಚುಗಳೇನು ಎಂಬುದನ್ನು ಈ ವರೆಗೂ ರಾಜ್ಯದ ಜನತೆಗೆ ಕಾಂಗ್ರೇಸ್ ಸರ್ಕಾರ ತಿಳಿಸಿರುವುದಿಲ್ಲಾ ಹಾಗು ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಅವಮಾನಿಸುತ್ತಿರುವ ಸಮಾಜ ವಿರೋಧಿ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ ಕರ್ನಾಟಕದ ಕಾಂಗ್ರೇಸ್ ಸರ್ಕಾರ ಹಿಂದೂಗಳ ಭಕ್ತಿ ಭಾವನೆಗಳಿಗೆ ಧಕ್ಕೆ ತರುವ ಹುನ್ನಾರವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಯಳವತ್ತಿ ಮಾತನಾಡಿ ಧರ್ಮಸ್ಥಳದ ವಿರುದ್ಧ ದುಷ್ಕಂತ್ಯವನ್ನು ತಡೆಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿಗಳು ಹಾಗು ಗೃಹಮಂತ್ರಿಗಳು ರಾಜ್ಯದ ಜನತೆಯ ಕ್ಷಮೆಯಾಚನೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಗದಗ ನಗರ ಮಂಡಲ ಅದ್ಯಕ್ಷ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಹಿರಿಯರಾದ ಜಗನ್ನಾಥಸಾ ಭಾಂಡಗೆ, ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೆಮಠ, ಬಿ.ಎಸ್.ಚಿಂಚಲಿ, ಪ್ರಮುಖರಾದ ನಾಗರಾಜ ಕುಲಕರ್ಣಿ, ಭೀಮಸಿಂಗ ರಾಠೋಡ, ಬಸವರಾಜ ಕೊರ್ಲಹಳ್ಳಿ, ಅಶೋಕ ಸಂಕಣ್ಣವರ, ಸಿದ್ದು ಪಲ್ಲೇದ, ಶಿವು ಹಿರೇಮನಿಪಾಟೀಲ, ರಮೇಶ ಸಜ್ಜಗಾರ, ಸಂತೋಷ ಅಕ್ಕಿ, ನಿರ್ಮಲಾ ಕೊಳ್ಳಿ, ಉಷಾ ದಾಸರ, ವಿಜಯಲಕ್ಷ್ಮೀ ಮಾನ್ವಿ, ಪ್ರಕಾಶ ಅಂಗಡಿ, ಮುತ್ತಣ್ಣ ಮುಶಿಗೇರಿ, ಚನ್ನಮ್ಮ ಹುಳಕಣ್ಣವರ, ಲಕ್ಷ್ಮೀಕಾಕಿ, ವಿದ್ಯಾವತಿ ಗಡಗಿ, ಮಹೇಶ ದಾಸರ, ಅಮರನಾಥ ಗಡಗಿ, ರಾಚಯ್ಯ ಹೊಸಮಠ, ರೇಖಾ ಬಂಗಾರಶೆಟ್ಟರ, ಶಂಕರ ಕಾಕಿ, ನವೀನ ಕೊಟೆಕಲ್, ಶೇಖಣ್ಣ ಕನ್ಯಾಳ, ಕುಮಾರ ಮಾರನಬಸರಿ, ಮಹಾದೇವಪ್ಪ ಚಿಂಚಲಿ, ಸುಭಾಸ ಸುಂಕದ, ವಾಯ್.ಪಿ.ಅಡ್ನೂರ, ಎಫ್.ಎಸ್.ಗೋಡಿ, ವಿಶ್ವನಾಥ ಹಳ್ಳಿಕೇರಿ, ಲಕ್ಷ್ಮಣ ದೊಡ್ಮನಿ, ಉಡಚಪ್ಪ ಹಳ್ಳಿಕೇರಿ, ಶೇಖಣ್ಣ ಕಟ್ಟಿಮನಿ, ರಮೇಶ ಹತ್ತಿಕಾಳ, ರವಿ ವಗ್ಗನವರ, ಮಂಜುನಾಥ ಹಳ್ಳೂರಮಠ, ನಾಗರಾಜ ಮದ್ನೂರ, ಸುರೇಶಗೌಡ ಬಸಶೇಟ್ಟಿಯವರ, ಸಂಜೀವ ಕಟವಟೆ, ಜಯಶ್ರೀ ಅಣ್ಣಿಗೇರಿ, ಬೂದಪ್ಪ ಮಾಡಳ್ಳಿ, ಶರಣಪ್ಪ ಬಂಗಾರಿ, ವೆಂಕಟೇಶ ಕೋಣಿ, ಚಂದ್ರಕಾಂತ ಜೈನರ್, ಅಪ್ಪು ನಮಸ್ತೆಮಠ, ಪ್ರೀತಿ ಶಿವಪ್ಪನಮಠ, ಸ್ವಾತಿಅಕ್ಕಿ, ಅನುಸೂಯಾ ಶಿಲವಂತರ, ಮಂಗಳಶಿಲವಂತರ, ಶಂಕರ ಮಲ್ಲಸಮುದ್ರ, ದೀಪಾ ಅಂಗಡಿ, ಕಲಾವತಿ, ಶಿಲ್ಪಾ, ತೃಪ್ತಿ, ನಂದಾ, ಮಂಜುಳಾ, ರೂಪಾ, ಶೃತಿ, ಕಲಾವತಿ, ಮಹಾಲಕ್ಷ್ಮೀ, ಗೀತಾ, ಸುಜಾತಾ, ಶಿಲ್ಪಾ, ಬಸವರಾಜ ನೆರೆಗಲ್, ವಿನಾಯಕ ಹೊರಕೇರಿ, ವಿನಾಯಕ ಕಾಟ್ವಾ, ವಿನೋದ ಹಂಸನೂರ ಹಾಗು ಇನ್ನೂ ಹಲವಾರು ಪ್ರಮುಖರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP