ಕೋಲಾರ, ೨೨ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಾಲೂರು ತಾಲೂಕಿನ ಹುಲಿಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಗೋಮಾಳದ ಜಮೀನಿದ್ದು, ಈ ಜಮೀನುಗಳಲ್ಲಿ ನಿರ್ಗತಿಕ ವಸತಿ ಹೀನರಿಗೆ ವಸತಿ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ಕೋಲಾರ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ಕೋಲಾರ ಜಿಲ್ಲಾ ಶಾಖೆ ವತಿಯಿಂದ ವಸತಿ ಹೀನರಿಗೆ ಎಲ್ಲ ಜಾತಿ ಬಡವರಿಗೆ ಮುಖ್ಯಮಂತ್ರಿಗಳ ಉಚಿತ ವಸತಿ ಯೋಜನೆಯಡಿಯಲ್ಲಿ ಮಾಲೂರು ತಾಲೂಕಿನ ಹುಲಿಮಂಗಲ ಗ್ರಾಮ ಪಂಚಾಯತಿ ಸರ್ವೇ ನಂ ೨೧೨ ರಲ್ಲಿ ೯ ಎಕರೆ, ೨೧೩ ರಲ್ಲಿ ೯ ಎಕರೆ, ೭೩ ರಲ್ಲಿ ೪ ಎಕರೆ, ೫೧ ರಲ್ಲಿ ೨.೩೦ ಗುಂಟೆ, ಸರ್ವೇ ನಂ, ೧೮೫ ರಲ್ಲಿ ೨೬ ಗುಂಟೆ, ಪಕ್ಕದ ಸೀತನಾಯಕನಹಳ್ಳಿ ಗ್ರಾಮದ ಸರ್ವೇ ನಂ ೪೯ ರಲ್ಲಿ ೪೮ ಎಕರೆ, ೪೨ ರಲ್ಲಿ ೪೮ ಎಕರೆ, ೪೯ ರಲ್ಲಿ ೫೦ ಎಕರೆ ಸರ್ಕಾರಿ ಗೋಮಾಳದ ಜಮೀನಿದ್ದು, ಈ ಜಮೀನುಗಳಲ್ಲಿ ನಿರ್ಗತಿಕ ವಸತಿ ಹೀನರಿಗೆ ವಸತಿ ನೀಡುವಂತೆ ಸುಮಾರು ೪-೫ ವರ್ಷಗಳಿಂದ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬರಲಾಗಿದೆ.
ಹುಲಿಮಂಗಲ ಗ್ರಾಮದ ರಾಜಕಾಲುವೆ ಮೇಲೆ ಕಟ್ಟಿರುವ ಮನೆಗಳನ್ನು ನೆಲಸಮ ಮಾಡುವಂತೆ ನ್ಯಾಯಾಲಯದ ಆದೇಶವಿದ್ದು, ಗ್ರಾಮದ ನಿವೇಶನದಾರರಿಗೆ ಬದಲಿ ನಿವೇಶನಗಳನ್ನು ನೀಡದೆ ಸಂಬಂಧಪಟ್ಟ ಅಧಿಕಾರಿಗಳು ವಿಳಂಭ ದೋರಣೆಯನ್ನು ಅನುಸರಿಸುತ್ತಿದ್ದಾರೆ ಜಿಲ್ಲಾ ಪಂಚಾಯತಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೂರಾರು ಮಂದಿ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ರಾಜ್ಯಾಧ್ಯಕ್ಷ ಡಾ.ಅಶ್ವಥ್ ಅಂತ್ಯಜ ಮಾತನಾಡಿ ಉಳಿಮೆಗೆ ಭೂಮಿ, ವಾಸಕ್ಕೆ ಮನೆ, ನಿವೇಶನ, ಶಿಕ್ಷಣ, ಉದ್ಯೋಗ, ಈ ಗ್ಯಾರಂಟಿಗಳನ್ನು ಸರ್ಕಾರ ನೀಡಬೇಕು, ಕೇವಲ ಓಟಿಗಾಗಿ ನೀಡುವ ಗ್ಯಾರಂಟಿಗಳು ಜನರ ಬದುಕನ್ನು ಸ್ವಾಭಿಮಾನಗೊಳಿಸುವುದಿಲ್ಲ, ಸರ್ಕಾರ ಶಾಶ್ವತವಾದ ಅಭಿವೃದ್ಧಿ ಕೆಲಸಗಳನ್ನು ನಾಗರೀಕ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕು, ನಿವೇಶನ ನೀಡಿಕೆಯಲ್ಲಿ ಆಗಿರುವ ವಿಳಂಭವನ್ನು ತುರ್ತಾಗಿ ಬಗೆಹರಿಸಿ ಗ್ರಾಮ ಪಂಚಾಯತಿ ವ್ಯಾಪ್ತಿ ಮತ್ತು ತಾಲೂಕು ಸುತ್ತಮುತ್ತಲ ಗ್ರಾಮಗಳಲ್ಲಿ ನಿವೇಶನ ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗಳಿಗೆ ಎಡಿಸಿ ಮೂಲಕ ಮತ್ತು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾ ಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕಿ ಎಸ್.ಸಿ.ಶೈಲಜಾ, ಬೆಂಗಳೂರು ವಿಭಾಗೀಯ ಸಂಯೋಜಕ ನಂಜುಂಡಪ್ಪ ಪಾಸ್ವಾನ್, ಅಹಿಂದ ಮಹಿಳಾ ರಾಜ್ಯಾಧ್ಯಕ್ಷೆ ಹೆಚ್.ಡಿ.ಶೋಭಾ, ಕೋಲಾರ ಜಿಲ್ಲಾ ಸಂಯೋಜಕ ಎಸ್.ಅಗ್ರಹಾರ ಅಂಬರೀಶ, ಜಿಲ್ಲಾ ಸಂಘಟನಾ ಸಂಯೋಜಕ ಬಂಗಾರಪೇಟೆ ನಾರಾಯಣಸ್ವಾಮಿ, ತಾಲೂಕು ಸಂಯೋಜಕ ಹುಲಿಮಂಗಲ ಶಂಕರ್, ಕಾಮರಸನಹಳ್ಳಿ ಗಂಗಮ್ಮ, ಅಲ್ಪಸಂಖ್ಯಾತ ಮುಖಂಡ ಮುಜೀರ್ ಅಹಮದ್, ಉಪ ಸಂಯೋಜಕ ಚಿನ್ನಸ್ವಾಮಿ, ನಗರ ಸಂಯೋಜಕ ಗಜೇಂದ್ರ, ಹಿರಯ ಮುಖಂಡರಾದ ಮುಳಬಾಗಿಲಿನ ಜಮ್ದಾಡಪ್ಪ, ಅಶೋಕ್, ಹೊಸಕೋಟೆ ರಾಜು ಇನ್ನಿತರರು ಇದ್ದರು.
ಚಿತ್ರ ; ವಸತಿ ಹೀನರಿಗೆ ವಸತಿ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ಕೋಲಾರ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್