ಬಳ್ಳಾರಿ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವ ಶಿಕ್ಷಣ ಭೋದಿಸಬೇಕು. ಅದು ಕೈಗಾರಿಕೆ ಮತ್ತು ಶಿಕ್ಷಣಸಂಸ್ಥೆಗಳ ಸಹಯೊಗದಲ್ಲಿ ಇನ್ನೂ ಪರಿಣಾಮಕಾರಿಯಾಗಿ ಪಠ್ಯಕ್ರಮ ರಚಿಸಲು ಸಹಕಾರಿಯಾಗುತ್ತದೆ ಮತ್ತು ಅದಕ್ಕೆ ಪೂರಕವಾದ ತಂತ್ರಜ್ಞಾನ ಬಳಸಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಮುನಿರಾಜು ಅವರು ತಿಳಿಸಿದ್ದಾರೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಣಿಶಾಸ್ತç ಅಧ್ಯಯನ ವಿಭಾಗದಲ್ಲಿ ಸ್ನಾತಕ ಪದವಿಯ ಉಪನ್ಯಾಸಕರಿಗಳಿಗೆ ಪ್ರಾಣಿಶಾಸ್ತç ವಿಷಯದ ಪಠ್ಯಕ್ರಮ ಮೌಲ್ಯಮಾಪನ ಮತ್ತು ಪ್ರಶ್ನೆ ಪತ್ರಿಕೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಸುರೇಶ ಎನ್.ಎಸ್ ಮತ್ತು ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ್.ಎನ್ ಅವರು ಪಠ್ಯಕ್ರಮ ಕುರಿತಾದ ರಚನೆಯ ಬಗ್ಗೆ, ಪಶ್ನೆ ಪತ್ರಿಕೆ ರಚನೆ ಮತ್ತು ಮೌಲ್ಯಮಾಪನ ಕುರಿತಾದ ವಿಷಯಗಳನ್ನು ಚರ್ಚಿಸಿ, ಮೌಲ್ಯಮಾಪನವಿಲ್ಲದೆ ಬೋಧನೆ ಕೊನೆಯಾಗುವುದಿಲ್ಲ ಎಂದು ತಿಳಿಸಿದ ಅವರು, ಬಳಿಕ ಬ್ಲೂಮ್ಸ್ ಟಾಕ್ಸನಾಮಿ ಕುರಿತಾಗಿ ಅನೇಕ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.
ಪ್ರಾಣಿಶಾಸ್ತç ವಿಭಾಗ ಮತ್ತು ಬಿ.ಓ.ಎಸ್ ಮುಖ್ಯಸ್ಥ ಡಾ.ಶಶಿಕಾಂತ.ಹೆಚ್ ಅವರು ಪ್ರಾಸ್ತಾವಿಕ ಮಾತನಾಡಿದರು.
ಕೆ-ಸೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಎಂಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ದೀಕ್ಷಾ, ಶ್ವೇತ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಾ.ನಾಗಭೂಷಣ ಚರಂತಿಮಠ, ಸ್ನೇಹ, ಸುಮಾ ಹೆಗಡೆ, ಡಾ.ಮನೋಹರ, ಡಾ.ಮಹಾಂತೇಶ ಅರಾಧ್ಯಮಠ, ವಿಜಯ ಗುಳಲಕಾಯ, ಡಾ.ಪೃಥ್ವಿರಾಜ.ಸಿ., ಬ್ಯುಲಾರಾಣಿ, ಸುಮಲತಾ, ರುಕ್ಕಮ್ಮ ಮತ್ತು ಇತರೆ ವಿವಿಧ ಕಾಲೇಜುಗಳ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು, ಎಂಎಸ್‌ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್