ವಿಜಯಪುರ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮನೆಗಳ ತೆರವುಗೊಳಿಸುವುದನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಕುದರಿ ಸಾಲವಾಡಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿನ ಮನೆಗಳ ತೆರವುಗೊಳಿಸುವುದನ್ನು ತಡೆಹಿಡಿಯಬೇಕು. ಅಲ್ಲದೇ, ಕುದರಿ ಸಾಲವಾಡಗಿ ಬಸ್ ನಿಲ್ದಾಣದಿಂದ ಮಹಾದೇಶ್ವರ ಮಠದ ವರೆಗೆ ಯಾಳವಾಡ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಅಗಲೀಕರಣ ಮಾಡುತ್ತಿದ್ದು, ಇದರಿಂದ ಸುಮಾರು 163 ಮನೆಗಳು ಹಾಗೂ ಎರಡು ಸಮುದಾಯ ಭವನಗಳು ನಾಶವಾಗುತ್ತವೆ. ಅದಕ್ಕಾಗಿ 15 ದಿನಗಳ ವರೆಗೂ ಕಾಲಾವಕಾಶ ಹಾಗೂ ತೆರವುಗೊಳಿಸಿದ್ರೇ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande