ವಿಜಯಪುರ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರದಲ್ಲಿ ಅಬ್ಬರದ ಮಳೆ ಹಿನ್ನೆಲೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 1.80 ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಬಾಂದಾರ್ ಕಂ ಬ್ರಿಡ್ಜ್ ಗಳ ಮುಳುಗಡೆ ಆಗಿದ್ದು, ಇದರಿಂದ ಮಹಾರಾಷ್ಟ್ರ ಕರ್ನಾಟಕ ಸಂಪರ್ಕ ಕಡಿತವಾಗಿದೆ.
ಅಲ್ಲದೇ, ಚಡಚಣ ತಾಲೂಕಿನ ಉಮರಜ-ಭಂಡಾರಕವಟೆ,
ಶಿರನಾಳ-ಆವಜ, ಉಮರಾಣಿ-ಸಹದೇವಪುರ ಬಾಂದಾರ್ ಕಂ ಬ್ರಿಡ್ಜ್ ಮುಳುಗಡೆ ಆಗಿದೆ.
ಇನ್ನೊಂದೆಡೆ ಇಂಡಿ ತಾಲೂಕಿನ ಹಿಂಗಣಿ - ಆಳಗಿ ಹಾಗೂ ಗುಬ್ಬೇವಾಡ - ಹೀಳಿ ಬಾಂದಾರ್ ಕಂ ಬ್ರಿಡ್ಜ್ ಮುಳುಗಡೆ ಆಗಿದೆ. ಅದಕ್ಕಾಗಿ ಘಟನಾ ಸ್ಥಳಕ್ಕೆ
ಚಡಚಣ ತಹಶಿಲ್ದಾರ ಸಂಜಯ್ ಇಂಗಳೆ ಹಾಗೂ ಇಂಡಿ ತಹಶಿಲ್ದಾರ ಬಿ ಎಸ್ ಖಡಕಬಾವಿ ಮುಳುಗಡೆ ಬಾಂದಾರ್ ಗಳ ವೀಕ್ಷಣೆ ಮಾಡಿದರು.
ಇನ್ನು ನದಿ ತಟದ ಜನರಿಗೆ ನದಿಯಲ್ಲಿ ಇಳಿಯಬಾರದು ಎಂದು ಸೂಚನೆ ನೀಡಿ, ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande