ವಿಜಯಪುರ, 22 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾದ್ಯಂತ ಆಗಸ್ಟ್ 27 ರಿಂದ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕೆಯಾಗಿ ವಿಶೇಷ ದಂಡಾಧಿಕಾರಿಗಳನ್ನು ನೇಮಿಸಿ, ಜಿಲ್ಲೆಯ ಉಪ ವಿಭಾಗಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರರು ತಾಲೂಕು ದಂಡಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಆದೇಶ ಹೊರಡಿಸಿದ್ದಾರೆ.
ಆಗಸ್ಟ್ 27 ಪ್ರತಿಷ್ಠಾಪನೆ ಹಾಗೂ ಆಗಸ್ಟ್ 31, ಸೆಪ್ಟೆಂಬರ್ 2, 4 ಹಾಗೂ ಸೆ.6ರವರೆಗೆ ವಿಜಯಪುರ ಉಪ ವಿಭಾಗಕ್ಕೆ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ (ಮೊ:9599909724), ಇಂಡಿ ಉಪ ವಿಭಾಗಕ್ಕೆ ಉಪ ವಿಭಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತ್ರದ (ಮೊ:9739749732), ವಿಜಯಪುರ ತಾಲೂಕಿಗೆ ತಹಶೀಲ್ದಾರ ಪಿ.ಎಸ್.ಚನಗೊಂಡ (ಮೊ:9482896370), ಇಂಡಿ ತಾಲೂಕಿಗೆ ತಹಶೀಲ್ದಾರ್ ಬಿ.ಎಸ್. ಕಡಕಭಾವಿ (ಮೊ:9902748240), ಬಸವನ ಬಾಗೇವಾಡಿ ತಾಲೂಕಿಗೆ ತಹಶೀಲ್ದಾರರಾದ ವೈ.ಎಸ್.ಸೋಮನಕಟ್ಟಿ (ಮೊ:9008712765), ಮುದ್ದೇಬಿಹಾಳ ತಾಲೂಕಿಗೆ ತಹಶೀಲ್ದಾರರಾದ ಶ್ರೀಮತಿ ಕೀರ್ತಿ ಚಾಲಕ (ಮೊ:8861438554), ಸಿಂದಗಿ ತಾಲೂಕಿಗೆ ತಹಶೀಲ್ದಾರರಾದ ಕರೆಪ್ಪ ಬೆಳ್ಳಿ (ಮೊ: 8105768671), ಬಬಲೇಶ್ವರ ತಾಲೂಕಿಗೆ ತಹಶೀಲ್ದಾರರಾದ ಶ್ರೀಮತಿ ಶಾಂತಲಾ ಚಂದನ (ಮೊ:9538385106),ತಿಕೋಟಾ ತಾಲೂಕಿನ ತಹಶೀಲ್ದಾರರಾದ ಸುರೇಶ ಚವಲರ್ (ಮೊ:9449943022), ಕೊಲ್ಹಾರ ತಾಲೂಕಿನ ತಹಶೀಲ್ದಾರರಾದ ಎಸ್.ಎಂ. ಮ್ಯಾಗೇರಿ (ಮೊ:8050069316), ನಿಡಗುಂದಿ ತಾಲೂಕಿಗೆ ತಹಶೀಲ್ದಾರರಾದ ಎ.ಡಿ.ಅಮರಾವಡಗಿ (ಮೊ:9482268533), ತಾಳಿಕೋಟಿ ತಾಲೂಕಿಗೆ ತಹಶೀಲ್ದಾರರಾದ ಶ್ರೀಮತಿ ವಿನಯಾ ಹೂಗಾರ (ಮೊ:8851542739), ದೇವರಹಿಪ್ಪರಗಿ ತಾಲೂಕಿಗೆ ತಹಶೀಲ್ದಾರರಾದ ಪ್ರಕಾಶ ಸಿಂದಗಿ (ಮೊ:9945856274), ಆಲಮೇಲ ತಾಲೂಕಿಗೆ ಪ್ರಭಾರಿ ತಹಶೀಲ್ದಾರರಾದ ಧನಪಾಲ್ ದೇವೂರು (ಮೊ:9972558196) ಹಾಗೂ ಚಡಚಣ ತಾಲೂಕಿಗೆ ತಹಶೀಲ್ದಾರರಾದ ಎಸ್.ಬಿ.ಇಂಗಳೆ (ಮೊ:9900776009) ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.
ಅದರಂತೆ, ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಮಹಾನಗರ ಪಾಲಿಕೆಯ ಕಂದಾಯ ಉಪ ಆಯುಕ್ತರಾದ ಮಹಾವೀರ ಬೋರಣವರನ್ನು ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂಬರ್ 01 ರಿಂದ 17ರವರೆಗೆ, ವಿಜಯಪುರ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂ 18 ರಿಂದ 35ರವರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಕಾರಿಗಳಾದ ಪ್ರಶಾಂತ ಪೂಜಾರಿ (ಮೊ: 9844849238) ಅವರನ್ನು ನಿಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande