ಆಗಸ್ಟ್ 28 ರಿಂದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ರಾಯಚೂರು ಜಿಲ್ಲಾ ಪ್ರವಾಸ
ರಾಯಚೂರು, 22 ಆಗಸ್ಟ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಅವರು ಆಗಸ್ಟ್ 28ರಿಂದ ಆಗಸ್ಟ್ 30ರವರೆಗೆ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಆಗಸ್ಟ್ 27ರ ಬೆಳಗ್ಗೆ 8.40ಕ್ಕೆ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಿಂದ ಉದ್ಯಾನ ಎಕ್ಸಪ್ರೆಸ್ ರೈಲ ಮೂ
ಆಗಸ್ಟ್ 28 ರಿಂದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ರಾಯಚೂರು ಜಿಲ್ಲಾ ಪ್ರವಾಸ


ರಾಯಚೂರು, 22 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಅವರು ಆಗಸ್ಟ್ 28ರಿಂದ ಆಗಸ್ಟ್ 30ರವರೆಗೆ ರಾಯಚೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಆಗಸ್ಟ್ 27ರ ಬೆಳಗ್ಗೆ 8.40ಕ್ಕೆ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಿಂದ ಉದ್ಯಾನ ಎಕ್ಸಪ್ರೆಸ್ ರೈಲ ಮೂಲಕ ಹೊರಟು ಆಗಸ್ಟ್ 28ರ ಬೆಳಿಗ್ಗೆ 4.13ಕ್ಕೆ ರಾಯಚೂರು ನಗರಕ್ಕೆ ಆಗಮಿಸಿ ಕೃಷಿ ವಿಶ್ವವಿದ್ಯಾಲಯದ ಹೊಸ ಅತಿಥಿ ಗೃಹಕ್ಕೆ ತೆರಳುವರು.

ಬಳಿಕ ಬೆಳಗ್ಗೆ 6.30ಕ್ಕೆ ಚಹಾ ಸೇವಿಸಿ ಕೆಲಕಡೆ ಭೇಟಿ ನೀಡುವರು. 9 ಗಂಟೆಗೆ ಉಪಹಾರ ಸೇವನೆ ಮಾಡುವರು. ಬಳಿಕ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ರವರೆಗೆ ನಗರದ ಕೆಲವೆಡೆ ಅನಿರಿಕ್ಷೀತ ಭೇಟಿ ನೀಡುವರು.

ಮಧ್ಯಾಹ್ನ 1.30 ರಿಂದ 2.30ರವರೆಗೆ ಕೃಷಿ ವಿವಿ ಅತಿಥಿ ಗೃಹದಲ್ಲಿ ಊಟದ ವಿರಾಮ ಇರುತ್ತದೆ. ಊಟದ ವಿರಾಮದ ನಂತರ ಮಧ್ಯಾಹ್ನ 2.30 ರಿಂದ ನಾನಾ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ನೀಡುವರು. ರಾತ್ರಿ 8.30ಕ್ಕೆ ಕೃಷಿ ವಿವಿ ಅತಿಥಿ ಗೃಹದಲ್ಲಿ ಊಟ ಮತ್ತು ವಾಸ್ತವ್ಯ ಮಾಡುವರು.

ಆಗಸ್ಟ್ 29ರ ಬೆಳಿಗ್ಗೆ 6.30ಕ್ಕೆ ಚಹಾ ವಿರಾಮದ ನಂತರ ವಿವಿಧ ಸ್ಥಳಗಳಿಗೆ ಭೇಟಿ ನೀಡುವರು. ಬಳಿಕ 9 ಗಂಟೆಗೆ ಉಪಹಾರ ಸೇವನೆ ಮಾಡುವರು. ಬಳಿಕ 10 ರಿಂದ ಮಧ್ಯಾಹ್ನ 1.30ಗಂಟೆವರೆಗೆ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವರು.

ಮಧ್ಯಾಹ್ನ 1.30 ರಿಂದ 2.30ರವರೆಗೆ ಕೃಷಿ ವಿವಿ ಅತಿಥಿ ಗೃಹದಲ್ಲಿ ಊಟದ ವಿರಾಮ ಇರುತ್ತದೆ. ಮಧ್ಯಾಹ್ನ 2.30ರಿಂದ 5 ಗಂಟೆವರೆಗೆ ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವರು.

ಸಂಜೆ 5.30ರಿಂದ 6.30 ಗಂಟೆವರೆಗೆ ಕೃಷಿ ವಿಶ್ವ ವಿದ್ಯಾಲಯದ ಆವರಣದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸಂಬAಧಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಆರ್‌ಡಿಪಿಆರ್, ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಉಪನೋಂದಣಿ ಕಚೇರಿ, ಆರ್‌ಟಿಒ, ಬಿಇಒ ಸೇರಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

ರಾತ್ರಿ 8.30ಕ್ಕೆ ಕೃಷಿ ವಿವಿ ಅತಿಥಿ ಗೃಹದಲ್ಲಿ ಊಟ ಮತ್ತು ವಾಸ್ತವ್ಯ ಮಾಡುವರು. ಆಗಸ್ಟ್ 30ರಂದು ಬೆಳಿಗ್ಗೆ 6.30ಕ್ಕೆ ಚಹಾ ವಿರಾಮದ ನಂತರ ವಿವಿಧ ಸ್ಥಳಗಳಿಗೆ ಭೇಟಿ ನೀಡುವರು. ಬಳಿಕ 9 ಗಂಟೆಗೆ ಉಪಹಾರ ಸೇವನೆ ಮಾಡುವರು. ಬಳಿಕ ಬೆಳಿಗ್ಗೆ 9.30 ಗಂಟೆಯಿ0ದ 10.45 ಗಂಟೆವರೆಗೆ ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲೆಯ ನ್ಯಾಯಾಂಗ ಅಧಿಕಾರಿಗಳು, ಲೋಕಾಯುಕ್ತ ಪೊಲೀಸರೊಂದಿಗೆ ಹಮ್ಮಿಕೊಂಡ ಸಭೆಯಲ್ಲಿ ಭಾಗಿಯಾಗುವರು.

ಬೆಳಿಗ್ಗೆ 11ರಿಂದ 1.45 ಗಂಟೆಗೆವರೆಗೆ ಕೃಷಿ ವಿಶ್ವ ವಿದ್ಯಾಲಯದ ಆವರಣದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ, ಆಗಸ್ಟ 29ರಂದು ಸಾರ್ವಜನಿಕರು ವ್ಯಕ್ತಪಡಿಸಿದ ಬಾಕಿ ಇರುವ ದೂರುಗಳು ಮತ್ತು ಕುಂದುಕೊರತೆಗಳ ಬಗ್ಗೆ ದೂರುದಾರರು ಹಾಗೂ ಪ್ರತಿವಾದಿಗಳ ಸಮ್ಮುಖದಲ್ಲಿ ರಾಯಚೂರಿಗೆ ಸಂಬAಧಿಸಿದ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ವಿಲೇವಾರಿ ನಡೆಸುವರು.

ಕೃಷಿ ವಿವಿಯ ಅತಿಥಿ ಗೃಹದಲ್ಲಿ ಮಧ್ಯಾಹ್ನ ಊಟದ ವಿರಾಮದ ನಂತರ, ಮಧ್ಯಾಹ್ನ 2.30 ರಿಂದ 8.30 ಗಂಟೆಗೆರೆಗೆ ಬೆಳಗಿನ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ವಿಲೇವಾರಿ ಕಾರ್ಯಕ್ರಮವನ್ನು ಮುಂದುವರೆಸುವರು.

ರಾತ್ರಿ 8.30ಕ್ಕೆ ಕೃಷಿ ವಿವಿಯ ಅತಿಥಿ ಗೃಹದಲ್ಲಿ ಊಟದ ವಿರಾಮದ ಬಳಿಕ ರಾತ್ರಿ ರಾತ್ರಿ 11.10ಕ್ಕೆ ರಾಯಚೂರು ರೈಲು ನಿಲ್ದಾಣದಿಂದ ಹಾಸನ ಎಕ್ಸಪ್ರೆಸ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತದ ರಿಜಿಸ್ಟ್ರಾರ್ ಎಮ್.ಚಂದ್ರಶೇಖರ ರೆಡ್ಡಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande