ರಕ್ತ ದಾನದಿಂದ ಸಂಕಷ್ಟದಲ್ಲಿರುವವರಿಗೆ ಮರು ಜೀವ ನೀಡಿದಂತೆ- ರವಿ ಬೋಸರಾಜು
ರಾಯಚೂರು, 22 ಆಗಸ್ಟ್ (ಹಿ.ಸ.) : ಆ್ಯಂಕರ್ : ದಾನಗಳಲ್ಲಿ ಶ್ರೇಷ್ಠವಾದ ದಾನವೆಂದರೆ ಅದು ರಕ್ತ ದಾನ. ರಕ್ತದಾನ ಮಾಡುವ ಮೂಲಕ ಇನ್ನೊಬರ ಜೀವಕ್ಕೆ ಮರು ಜೀವ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿದ್ದಾರೆ. ರಾಯಚೂರಿನ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿಯ
ರಕ್ತ ದಾನದಿಂದ ಸಂಕಷ್ಟದಲ್ಲಿರುವವರಿಗೆ ಮರು ಜೀವ ನೀಡಿದಂತೆ- ರವಿ ಬೋಸರಾಜು


ರಕ್ತ ದಾನದಿಂದ ಸಂಕಷ್ಟದಲ್ಲಿರುವವರಿಗೆ ಮರು ಜೀವ ನೀಡಿದಂತೆ- ರವಿ ಬೋಸರಾಜು


ರಕ್ತ ದಾನದಿಂದ ಸಂಕಷ್ಟದಲ್ಲಿರುವವರಿಗೆ ಮರು ಜೀವ ನೀಡಿದಂತೆ- ರವಿ ಬೋಸರಾಜು


ರಕ್ತ ದಾನದಿಂದ ಸಂಕಷ್ಟದಲ್ಲಿರುವವರಿಗೆ ಮರು ಜೀವ ನೀಡಿದಂತೆ- ರವಿ ಬೋಸರಾಜು


ರಾಯಚೂರು, 22 ಆಗಸ್ಟ್ (ಹಿ.ಸ.) :

ಆ್ಯಂಕರ್ : ದಾನಗಳಲ್ಲಿ ಶ್ರೇಷ್ಠವಾದ ದಾನವೆಂದರೆ ಅದು ರಕ್ತ ದಾನ. ರಕ್ತದಾನ ಮಾಡುವ ಮೂಲಕ ಇನ್ನೊಬರ ಜೀವಕ್ಕೆ ಮರು ಜೀವ ನೀಡಿದಂತಾಗುತ್ತದೆ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ತಿಳಿಸಿದ್ದಾರೆ.

ರಾಯಚೂರಿನ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ವಿಶ್ವ ಸಹೋದರತ್ವ ದಿನದ ಅಂಗವಾಗಿ ರಾಯಚೂರಿನ ಎಲ್ ವಿಡಿ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲಿಯೂ ಸಹ ರಕ್ತದ ಕೊರತೆ ಇದೆ‌. ಸಂಕಷ್ಟದ ಸಂದರ್ಭದಲ್ಲಿರುವ ರೋಗಿಗಳಿಗೆ ನಾವು ಇಂದು ಮಾಡಿರುವ ರಕ್ತದಾನ ಅವರಿಗೆ ಮತ್ತೊಮ್ಮೆ ಜೀವ ತುಂಬಲಿದೆ. ರಕ್ತದಾನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಯುವ ಜನರು ಕೆಟ್ಟ ಚಟಗಳಿಗೆ ದಾಸರಾಗದೆ, ಆರೋಗ್ಯವಂತರಾಗಿ ಇನ್ನೊಂದು ಜೀವ ಉಳಿಸುವ ರಕ್ತದಾನ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.

ನನ್ನ ಎಲ್ಲಾ ಸ್ನೇಹಿತರು, ಹಿತೈಶಿಗಳು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸುವ ಮೂಲಕ ಇನ್ನೊಬ್ಬರ ಪ್ರಾಣ ಉಳಿಸಲು ಕೈಜೋಡಿಸಬೇಕೆಂದು ಮನವಿ‌ ಮಾಡಿದರು.

ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸ್ಮಿತಾ ಅಕ್ಕ, ತಾರಾನಾಥ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಾರಸ್ಮಾಲ್ ಸುಖಾಣಿ, ಕೆ ಶಾಂತಪ್ಪ, ರಿಮ್ಸ್ ನಿರ್ದೇಶಕರಾದ ಡಾ. ರಮೇಶ, ರಾಜಶೇಖರ್ ಮುಸ್ಟೂರು, ಎಸ್ ಸಿಎಬಿ ಕಾನೂನು ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಪದ್ಮಾ, ವಸುಂದರಾ, ಅರುಣಾ ಹಿರೇಮಠ, ತಿಮ್ಮಾರಡ್ಡಿ, ರವಿ ರಾಂಪೂರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande