ಬಳ್ಳಾರಿ : ಆಗಸ್ಟ್ 25 ರ ಸೋಮವಾರ ರಕ್ತದಾನ ಶಿಬಿರ
ಬಳ್ಳಾರಿ, 22 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ ಪವಿತ್ರ ಸ್ಮರಣಾರ್ಥ ಆಗಸ್ಟ್ 25ರ ಸೋಮವಾರ ಬೃಹತ್ ರಕ್ತದಾನ ಅಭಿಯಾನ-2025 ಅನ್ನು ಪಾರ್ವತಿನಗರದ ಬ್ರಹ್ಮಕುಮಾರಿ ಶಿವಧ್ಯಾನ - ಜ್ಞಾನ ಮಂದಿರದಲ್ಲಿ ಹಮ್ಮಿಕೊಳ್
ಬಳ್ಳಾರಿ : ಆಗಸ್ಟ್ 25 ರ ಸೋಮವಾರ ರಕ್ತದಾನ ಶಿಬಿರ


ಬಳ್ಳಾರಿ, 22 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ದಾದಿ ಪ್ರಕಾಶಮಣಿ ಅವರ ಪವಿತ್ರ ಸ್ಮರಣಾರ್ಥ ಆಗಸ್ಟ್ 25ರ ಸೋಮವಾರ ಬೃಹತ್ ರಕ್ತದಾನ ಅಭಿಯಾನ-2025 ಅನ್ನು ಪಾರ್ವತಿನಗರದ ಬ್ರಹ್ಮಕುಮಾರಿ ಶಿವಧ್ಯಾನ - ಜ್ಞಾನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬ್ರಹ್ಮಕುಮಾರಿ ನಿರ್ಮಲ ಅವರು ತಿಳಿಸಿದ್ದಾರೆ.

ಸುದ್ದಿಗಾರರಿಗೆ ಶುಕ್ರವಾರ ಈ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯಲಿದ್ದು, 250ಕ್ಕೂ ಹೆಚ್ಚಿನ ಸಂಖ್ಯೆಯ ದಾನಿಗಳ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸಲಾಗಿದೆ. ಭಾರತ ಮತ್ತು ನೇಪಾಳದಲ್ಲಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರವನ್ನು ಜೆ.ಪಿ. ನಡ್ಡಾ ಅವರು ಆಗಸ್ಟ್ 17 ರಂದು ಉದ್ಘಾಟಿಸಿದ್ದು, ಆಗಸ್ಟ್ 22 ರಿಂದ 25ರವರೆಗೆ 100 ತಾಸುಗಳ ಕಾಲ 1 ಲಕ್ಷ ಯೂನಿಟ್ ರಕ್ತ ದಾನದ ಗುರಿಯನ್ನು ಹೊಂದಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬ್ರಹ್ಮಕುಮಾರಿಯರಾದ ಮಂಜುಳ, ರಶ್ಮಿ ಮತ್ತು ರಾಜೇಶ್ವರಿ ಅವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande