ಪಾಟ್ನಾ, 17 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತ ಕಳ್ಳತನ ವಿರೋಧಿಸಿ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದಿನಿಂದ ಮತದಾರರ ಅಧಿಕಾರ ಯಾತ್ರೆ ಆರಂಭವಾಗಲಿದೆ.
ಈ ಯಾತ್ರೆಯು ಸಸಾರಾಮ್‌ನಿಂದ ಆರಂಭಗೊಳ್ಳಲಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಇಂಡಿ ಒಕ್ಕೂಟದ ಎಲ್ಲಾ ನಾಯಕರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಬಿಹಾರದ ಸಸಾರಾಮ್‌ನಿಂದ ಯಾತ್ರೆ ಆರಂಭವಾಗಲಿದ್ದು ೧೬ ದಿನಗಳಲ್ಲಿ 1300 ಕಿ.ಮೀ ಸಾಗಲಿದ್ದು ಸೆಪ್ಟೆಂಬರ್ ೧ರಂದು ಪಾಟ್ನಾದಲ್ಲಿ ಬೃಹತ್ ರ್ರ್ಯಾಲಿಯೊಂದಿಗೆ ಯಾತ್ರೆ ಮುಕ್ತಾಯಗೊಳ್ಳಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa