ಹುಬ್ಬಳ್ಳಿ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಳೆಗಾಲದಲ್ಲಿ ಕಾಡುವ ನೆಗಡಿ, ಕೆಮ್ಮು, ಜ್ವರ ಸಮಸ್ಯೆಗೆ ಉತ್ತಮ ಮನೆಮದ್ದು ನುಗ್ಗೆಕಾಯಿ ಸೂಪ್. ರೋಗ ನಿರೋಧಕ ಶಕ್ತಿ ಹೆಚ್ಚಿಸುವು ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ಇಲ್ಲಿದೆ...
ಬೇಕಾಗುವ ಸಾಮಗ್ರಿಗಳು
ನುಗ್ಗೆಕಾಯಿ, ಈರುಳ್ಳಿ,ಟೊಮ್ಯಾಟೊ, ಕೋಸುಗಡ್ಡೆ,ಬೆಳ್ಳುಳ್ಳಿ, ಶುಂಠಿ, ಉಪ್ಪು ರುಚಿಗೆ ತಕ್ಕಷ್ಟು,ಅರಿಶಿನ ಪುಡಿ, ಜೀರಿಗೆ,ತುಪ್ಪ ,ಕರಿಬೇವು
ತಯಾರಿಸುವ ವಿಧಾನ:
ನುಗ್ಗೆಕಾಯಿ ಮತ್ತು ಇತರ ತರಕಾರಿಗಳನ್ನು ತೊಳೆದು ಕತ್ತರಿಸಿ.
ಪ್ರೆಶರ್ ಕುಕ್ಕರ್‌ನಲ್ಲಿ ಹಾಕಿ, ಉಪ್ಪು, ಅರಿಶಿನ, ಜೀರಿಗೆ ಹಾಗೂ ನೀರು ಸೇರಿಸಿ 5 ವಿಷಲ್ ಬರುವವರೆಗೂ ಬೇಯಿಸಿ.
ತಣ್ಣಗಾದ ಮೇಲೆ ನುಗ್ಗೆಕಾಯಿಯ ತಿರುಳನ್ನು ತೆಗೆದು, ಮಿಶ್ರಣಕ್ಕೆ ಮರಳಿ ಸೇರಿಸಿ ಕುದಿಸಿ.
ತುಪ್ಪ, ಜೀರಿಗೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ ಸೇರಿಸಿದರೆ ನುಗ್ಗೆಕಾಯಿ ಸೂಪ್ ತಯಾರು.
ಆರೋಗ್ಯ ಲಾಭ: ವಿಟಮಿನ್ ಸಿ ಮತ್ತು ಕಬ್ಬಿಣ ಸಮೃದ್ಧ
ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ, ಶೀತ-ಜ್ವರ ತಡೆಯಲು ಒಳ್ಳೆಯದು
ಆರೋಗ್ಯ ಸಲಹೆ:
ನುಗ್ಗೆಕಾಯಿ ಸೇವನೆ ಹೃದಯಕ್ಕೆ ಒಳ್ಳೆಯದು, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ. ದಿನಕ್ಕೆ ಒಂದು ಬಾರಿಯಾದರೂ ನುಗ್ಗೆಕಾಯಿ ಸೂಪ್ ಅಥವಾ ಪಲ್ಯ ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ಸಮತೋಲನದಲ್ಲಿ ಇರುತ್ತದೆ. ಮಳೆಗಾಲದಲ್ಲಿ ಬಿಸಿ ಬಿಸಿ ಪಾನೀಯಗಳ ಸೇವನೆ ಶೀತ-ಜ್ವರ ತಡೆಯಲು ಸಹಾಯಕ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa