ವಿಜಯಪುರ, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸಂಸದ ರಾಹುಲ್ ಗಾಂಧಿ ತಲೆ ಇಲ್ಲದ ಲೀಡರ್ ಇದ್ದಾನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಮತಗಳ್ಳತನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಯ ತಂದೆ, ಅಜ್ಜಿ ಒಳ್ಳೆಯ ಲೀಡರ್ ಇದ್ದರು. ಇವನನ್ನು ಹೇಗೆ ದೇಶದ ವಿರೋಧ ಪಕ್ಷದ ನಾಯಕ ಮಾಡಿದ್ದಾರೆ ಎನ್ನುವುದು ದೇವರಿಗೆ ಗೊತ್ತು ಎಂದು ಲೇವಡಿ ಮಾಡಿದರು.
ಇನ್ನು ರಾಹುಲ್ ಗಾಂಧಿ ಸಣ್ಣ ಹುಚ್ಚ ಹುಡುಗ ಇದ್ದಾನೆ. 75 ವರ್ಷ ದೇಶ ಆಡಳಿತ ಮಾಡಿದ ಮನೆತನದವನು ಇವನಿಗೆ ಡ್ರೆಸ್ ಕೋಡ್ ಸಹ ತಲೆಯಲ್ಲಿ ಇಲ್ಲ. ಸೊಂಟ ಕಾಣುವ ಹಾಗೆ ಡ್ರೆಸ್ ಹಾಕ್ಕೊಂಡು ಬರ್ತಾನೆ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande