ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ ಕಿಡಿ
ವಿಜಯಪುರ, 10 ಆಗಸ್ಟ್ (ಹಿ.ಸ.) : ಆ್ಯಂಕರ್ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಂತಹ ಕ್ರಿಮಿನಲ್‌‌ಗೆ ನಾನು ಜೀ ಎನ್ನುವುದಿಲ್ಲ ಎಂದು ವಿಜಯಪುರ ಶಾಸಕ ಬಸವಗೌಡ ಪಾಟೀಲ ಯತ್ನಾಳ ಹೇಳಿದರು. ಬಾಗಲಕೋಟೆ ನಗರದಲ್ಲಿ ಬಾಪೂಜಿ ಬ್ಯಾಂಕಿನ ಕಾರ್ಯಕ್ರಮಕ್ಕೆ ಆಗಮಿಸಿದ ಸಮಯದಲ್ಲಿ ಮಾಧ್ಯಮ ಎದುರು ಮಾತನಾಡಿದ ಅವರ
ಯತ್ನಾಳ


ವಿಜಯಪುರ, 10 ಆಗಸ್ಟ್ (ಹಿ.ಸ.) :

ಆ್ಯಂಕರ್ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಂತಹ ಕ್ರಿಮಿನಲ್‌‌ಗೆ ನಾನು ಜೀ ಎನ್ನುವುದಿಲ್ಲ ಎಂದು ವಿಜಯಪುರ ಶಾಸಕ ಬಸವಗೌಡ ಪಾಟೀಲ ಯತ್ನಾಳ ಹೇಳಿದರು.

ಬಾಗಲಕೋಟೆ ನಗರದಲ್ಲಿ ಬಾಪೂಜಿ ಬ್ಯಾಂಕಿನ ಕಾರ್ಯಕ್ರಮಕ್ಕೆ ಆಗಮಿಸಿದ ಸಮಯದಲ್ಲಿ ಮಾಧ್ಯಮ ಎದುರು ಮಾತನಾಡಿದ ಅವರು, ನಾನು ಬಿಜೆಪಿ ಸೇರುವ ಇಚ್ಚೆ ಈಗ ಸದ್ಯಕ್ಕೆ ಏನು ಇಲ್ಲ. ಸದ್ಯಕ್ಕೆ ಯಾರ ಜೊತೆಗೂ ನಾನು ಮಾತನಾಡಿಲ್ಲ ಎಂದರು.

ಇನ್ನು ಧರ್ಮಸ್ಥಳದಲ್ಲಿ ಎಸ್ ಐ ಟಿ ತನಿಖೆ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಯತ್ನಾಳ, ಧರ್ಮಸ್ಥಳದಲ್ಲಿ ವೀರೇಂದ್ರ ಹೆಗಡೆ ಅವರಿಗೆ ಅಪಮಾನ ಮಾಡಬೇಕೆಂದು ಇಂತಹ ಕೆಲಸ ಮಾಡುತ್ತಿದ್ದಾರೆ. ಎಸ್ ಡಿ ಪಿ ಐ ದವರಿಗೆ ಏನು ಕೆಲಸ ಇದೆ. ಅವರು ಏಕೆ ಅಲ್ಲಿ ಪ್ರತಿಭಟನೆ ಮಾಡುತ್ತಾರೆ ಎಂದು ಯತ್ನಾಳ ಪ್ರಶ್ನಿಸಿದರು.

ಎಸ್ಐಟಿ, ಮುಖ್ಯಮಂತ್ರಿ ಕೃಷಾಪೋಷಿತ ಸಂಸ್ಥೆ. ಹಿಂದೂ ದೇವಾಲಯ ಟಾರ್ಗೆಟ್ ಮಾಡಲು ಇಂತಹ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಬರ್ ಸರ್ಕಾರ, ಹಿಂದೂಗಳನ್ನು ಮುಗಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande