ವಿಜಯಪುರ, 10 ಆಗಸ್ಟ್ (ಹಿ.ಸ.) :
ಆ್ಯಂಕರ್ : ವಿಜಯಪುರ ಜಿಲ್ಲಾ ಬಿಜೆಪಿ ವತಿಯಿಂದ ಹರ ಘರ್ ತಿರಂಗಾ ಯಾತ್ರೆಗೆ ಸಂಸದ ರಮೇಶ ಜಿಗಜಿಣಗಿ ವಿಜಯಪುರ ನಗರದ ಗೋದಾವರಿ ರಸ್ತೆಯಲ್ಲಿ ಚಾಲನೆ ನೀಡಿದರು.
ರಾಷ್ಟ್ರಭಕ್ತಿಯನ್ನು ಬಿಂಬಿಸುವ ಬೈಕ್ ರ‌್ಯಾಲಿ ನಡೆಯಿತು. ಬೈಕ್‌ಗೆ ತ್ರಿವರ್ಣ ಧ್ವಜ ಸಿಕ್ಕಿಸಿ ರ‌್ಯಾಲಿಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿಬೋಲೊ ಭಾರತ ಮಾ ಕೀ ಜೈ, ವಂದೇ ಮಾತರಂ ಘೋಷಣೆ ಹಾಕುತ್ತ ಬೈಕ್ ರ‌್ಯಾಲಿ ವಿಜಯಪುರ ನಗರದ ಸೆಟಲೈಟ್ ಬಸ್ ಸ್ಟ್ಯಾಂಡ್‌ನಿಂದ ಶಿವಾಜಿ ಸರ್ಕಲ್, ಉಪ್ಪಲಿ ಬುರ್ಜ, ಗಾಂಧಿ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತವನ್ನು ಸುತ್ತುವರಿದು ಗಾಂಧಿ ವೃತ್ತದಿಂದ ಶಿವಾಜಿ ಸರ್ಕಲ್ ನಲ್ಲಿ ಸಮಾಪ್ತಗೊಂಡಿತ್ತು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಲ್ಲಾಧ್ಯಕ್ಷರ ಗುರುಲಿಂಗಪ್ಪ ಅಂಗಡಿ, ಉಮೇಶ ಕಾರಜೋಳ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande