ಭಾರತದ ಉತ್ಪನ್ನಗಳಿಗೆ ಅಮೆರಿಕ ಸುಂಕ : ಆಗಸ್ಟ್ 7ರಿಂದ ಜಾರಿಗೆ
ವಾಷಿಂಗ್ಟನ್, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಕೆಲವು ಉತ್ಪನ್ನಗಳ ಮೇಲೆ 25% ಆಮದು ತೆರಿಗೆ ವಿಧಿಸುವ ಅಮೆರಿಕದ ಆದೇಶವು ಈಗ ಆಗಸ್ಟ್ 7ರಿಂದ ಜಾರಿಗೆ ಬರಲಿದೆ. ಈ ಹಿಂದೆಯೇ ಆಗಸ್ಟ್ 1ರಿಂದ ಜಾರಿ ಆಗಬೇಕಿದ್ದರೂ, ವೈಟ್ ಹೌಸ್ ಆದೇಶವನ್ನು ಮುಂದೂಡಿದೆ. ಅಮೆರಿಕದ ಹೊಸ
Tax


ವಾಷಿಂಗ್ಟನ್, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಕೆಲವು ಉತ್ಪನ್ನಗಳ ಮೇಲೆ 25% ಆಮದು ತೆರಿಗೆ ವಿಧಿಸುವ ಅಮೆರಿಕದ ಆದೇಶವು ಈಗ ಆಗಸ್ಟ್ 7ರಿಂದ ಜಾರಿಗೆ ಬರಲಿದೆ. ಈ ಹಿಂದೆಯೇ ಆಗಸ್ಟ್ 1ರಿಂದ ಜಾರಿ ಆಗಬೇಕಿದ್ದರೂ, ವೈಟ್ ಹೌಸ್ ಆದೇಶವನ್ನು ಮುಂದೂಡಿದೆ.

ಅಮೆರಿಕದ ಹೊಸ ಸುಂಕ ನೀತಿ ಪಟ್ಟಿಯಲ್ಲಿ ಭಾರತಕ್ಕೆ 25%, ಕನಡಾಕ್ಕೆ 35%, ಸಿರಿಯಾಗೆ 41%, ಲಾವೋಸ್ ಮತ್ತು ಮ್ಯಾನ್ಮಾರ್‌ಗೆ 39% ಇತ್ಯಾದಿ ತೆರಿಗೆ ವಿಧಿಸಲಾಗಿದೆ. ರಷ್ಯಾದಿಂದ ಶಸ್ತ್ರಾಸ್ತ್ರ ಮತ್ತು ಇಂಧನ ಖರೀದಿಯ ಹಿನ್ನೆಲೆಯಲ್ಲಿಯೇ ಭಾರತಕ್ಕೆ ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.

ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಂಸತ್ತಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ದೇಶದ ಹಿತಕ್ಕನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande