ವಾಷಿಂಗ್ಟನ್, 01 ಆಗಸ್ಟ್ (ಹಿ.ಸ.) :
ಆ್ಯಂಕರ್ :
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 1977ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಆಧಾರವನ್ನಾಗಿ ಮಾಡಿಕೊಂಡು ವಿಧಿಸಿದ್ದ ವ್ಯಾಪಾರ ಸುಂಕಗಳ ಕುರಿತಂತೆ, ಫೆಡರಲ್ ಸರ್ಕ್ಯೂಟ್ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರು ಗುರುವಾರ ತೀವ್ರ ಪ್ರಶ್ನೆಗಳ ಮೂಲಕ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸುಂಕಕ್ಕೆ ಐಪಿಎಯಲ್ಲಿ ಅವಕಾಶವಿದೆಯೇ?
ನ್ಯಾಯಾಧೀಶ ಜಿಮ್ಮಿ ರೇನಾ, “ಈ ಕಾನೂನಿನಲ್ಲಿ ಎಲ್ಲಿಯೂ 'ಸುಂಕ' ಎಂಬ ಪದದ ಉಲ್ಲೇಖವಿಲ್ಲ. ಹಾಗಾದರೆ ಅಧ್ಯಕ್ಷರು ಈ ಕಾನೂನನ್ನು ಆಧಾರವನ್ನಾಗಿ ಮಾಡಿಕೊಂಡು ಹೇಗೆ ಸುಂಕ ವಿಧಿಸಬಹುದು? ಎಂದು ಪ್ರಶ್ನಿಸಿದರು.
ನ್ಯಾಯಾಧೀಶ ತಿಮೋತಿ ಡಿಕ್ :
“ಈ ಕಾನೂನಿನ ಉದ್ದೇಶ ಕಾಂಗ್ರೆಸ್‌ನಿಂದ ಅಧ್ಯಕ್ಷನಿಗೆ ಸಂಪೂರ್ಣ ವ್ಯಾಪಾರ ನಿಯಂತ್ರಣವನ್ನು ನೀಡುವುದು ಅಲ್ಲ ಎಂಬುದು ಸ್ಪಷ್ಟ.”
ಎದುರಾಳಿ ಅಭಿಪ್ರಾಯಗಳು:
ವಿಚಾರಣೆಯಲ್ಲಿ ಭಾಗವಹಿಸಿದ ಖಾಸಗಿ ಕಂಪನಿಗಳು ಮತ್ತು 11 ಡೆಮಾಕ್ರಟಿಕ್ ಪಕ್ಷದ ರಾಜ್ಯಗಳು, ವ್ಯಾಪಾರ ಕೊರತೆ ಅಥವಾ ಮಾದಕವಸ್ತು ಕಳ್ಳಸಾಗಣೆ ಎಂಬವು ತುರ್ತು ಪರಿಸ್ಥಿತಿಗಳಾಗಿಲ್ಲ ಎಂಬುದಾಗಿ ವಾದಿಸಿವೆ. ಈ ಸಮಸ್ಯೆಗಳು ದಶಕಗಳಿಂದ ಅಸ್ತಿತ್ವದಲ್ಲಿವೆ, ಆದ್ದರಿಂದ ಟ್ರಂಪ್ ಅವರು ತುರ್ತು ಕ್ರಮವೆಂದು ಕರೆದಿದ್ದು ಕಾನೂನಿಗೆ ವಿರುದ್ದವಾಗಿದೆ ಎಂದು ದೂರಿದ್ದಾರೆ.
ಅಪಾಯವೆ ಕಾನೂನುಬದ್ಧ ತುರ್ತು ಸ್ಥಿತಿ?
ನ್ಯಾಯಮೂರ್ತಿಗಳು ಇತ್ತೀಚಿನ ಟ್ರಂಪ್ ಕಾರ್ಯನಿರ್ವಾಹಕ ಆದೇಶದ ಮಾನ್ಯತೆಯನ್ನು ಪ್ರಶ್ನಿಸುತ್ತಾ, ಅಮೆರಿಕದ ತಯಾರಿಕಾ ಸಾಮರ್ಥ್ಯದ ಕುಸಿತ ಅಥವಾ ಉದ್ಯೋಗ ನಷ್ಟ ತುರ್ತು ಪರಿಸ್ಥಿತಿ ಎನಿಸಬಹುದೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಒಬಾಮಾ ನೇಮಿಸಿದ ನ್ಯಾಯಾಧೀಶ ರಿಚರ್ಡ್ ಟ್ಯಾರಂಟೊ, ಟ್ರಂಪ್ ಆಡಳಿತ ಈ ಸಮಸ್ಯೆಗಳನ್ನು ತುರ್ತು ಪರಿಸ್ಥಿತಿಯಾಗಿ ರೂಪಿಸಬೇಕೆಂದರೆ ಹೆಚ್ಚಿನ ಸಮರ್ಥನೆ ನೀಡಬೇಕಿತ್ತು, ಎಂದು ಹೇಳಿದರು.
ಟ್ರಂಪ್ ಆಡಳಿತದ ವಾದ:
ನ್ಯಾಯಾಂಗ ಇಲಾಖೆಯ ವಕೀಲ ಬ್ರೆಟ್ ಶುಮಾಟೆ, ಟ್ರಂಪ್ ಅವರು ತುರ್ತು ಪರಿಸ್ಥಿತಿ ಘೋಷಿಸುವ ಹಕ್ಕಿನ ಭಾಗವಾಗಿ ಈ ಕ್ರಮ ಕೈಗೊಂಡಿರುವುದಾಗಿ ಪ್ರತಿಪಾದಿಸಿದರು.
ಅವರ ಪ್ರಕಾರ, ಯುರೋಪಿಯನ್ ಒಕ್ಕೂಟದೊಂದಿಗೆ ಟ್ರಂಪ್ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ದೀರ್ಘಾವಧಿಯ ವ್ಯಾಪಾರ ಸಮಾಧಾನಕ್ಕೆ ದಾರಿ ತೋರಿಸುತ್ತದೆ.
ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನೆ:
ವ್ಯಾಪಾರ ಕೊರತೆಯು ತುರ್ತು ಪರಿಸ್ಥಿತಿಗೆ ಸಮಾನವೇ?
ಫೆಡರಲ್ ನ್ಯಾಯಾಲಯ ಈ ಪ್ರಶ್ನೆಯ ತಾತ್ವಿಕ ಅಂಶಗಳತ್ತ ಗಮನ ಹರಿಸಿದ್ದು, ಈ ತೀರ್ಪು ಭವಿಷ್ಯದ ಅಧ್ಯಕ್ಷರು IEEPA ಅಡಿಯಲ್ಲಿ ತುರ್ತು ಸುಂಕಗಳನ್ನು ಹೇಗೆ ಬಳಸಬಹುದು ಎಂಬುದಕ್ಕೆ ಮಾದರಿ ತೀರ್ಪಾಗುವ ಸಾಧ್ಯತೆ ಇದೆ.
ಈ ಮೊದಲು, ನ್ಯೂಯಾರ್ಕ್‌ನ ಯುಎಸ್ ಅಂತರರಾಷ್ಟ್ರೀಯ ವ್ಯಾಪಾರ ನ್ಯಾಯಾಲಯ ಟ್ರಂಪ್ ಅಧಿಕಾರ ಮೀರಿ ಸುಂಕ ವಿಧಿಸಿದ್ದಾರೆ ಎಂದು ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಟ್ರಂಪ್ ಆಡಳಿತ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಫೆಡರಲ್ ನ್ಯಾಯಾಲಯದ ಪೂರ್ಣ ಪೀಠ 11 ನ್ಯಾಯಾಧೀಶರೊಂದಿಗೆ ವಿಚಾರಣೆ ನಡೆಸಿದ್ದು, ತೀರ್ಪು ಯಾವುದೇ ಸಮಯದಲ್ಲಾದರೂ ಬರಬಹುದು. ಮುಂದಿನ ಹಂತದಲ್ಲಿ ಈ ಪ್ರಕರಣ ಸುಪ್ರೀಂ ಕೋರ್ಟ್‌ಗೆ ಸಾಗುವ ಸಾಧ್ಯತೆಯೂ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa