ಗದಗ, 08 ಜುಲೈ (ಹಿ.ಸ.) :
ಆ್ಯಂಕರ್ : ಮೀನುಗಾರಿಕೆ ಇಲಾಖೆ ಗದಗ ವತಿಯಿಂದ 2025-26ನೇ ಸಾಲಿನ ಜಿಲ್ಲಾ ವಲಯದ ಮೀನು ಮಾರುಕಟ್ಟೆಗಳ ನಿರ್ಮಾಣ ಹಾಗೂ ಮೀನು ಮಾರಾಟಕ್ಕೆ ಸಹಾಯ ಯೋಜನೆಯಡಿ ದ್ವಿಚಕ್ರ ವಾಹನ ಮತ್ತು ಐಸ್ಬಾಕ್ಸ್ ಖರೀದಿಸಿದವರಿಗೆ ಸಹಾಯಧನ, ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಮೀನುಗಾರರಿಗೆ ಉಚಿತವಾಗಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ ಹಾಗೂ ಮೀನುಕೃಷಿಗೆ ಸಹಾಯಧನ ಕೊಳ ನಿರ್ಮಾಣ ಮತ್ತು ಹೂಡಿಕೆವೆಚ್ಛ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಮೂಲಕ ದಿನಾಂಕ:07/08/2025 ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರು ಗದಗ ಅಥವಾ ಮೀನುಗಾರಿಕೆ ಸಹಾಯಕ ನಿರ್ದೇಶಕರು ಗದಗ/ ಮುಂಡರಗಿ(ಮೊಬೈಲ್ ಸಂ: 8095792530) ರವರನ್ನು ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP