ಬೆಂಗಳೂರು, 06 ಜುಲೈ (ಹಿ.ಸ.) :
ಆ್ಯಂಕರ್ : ಪುಸ್ತಕ ಪ್ರೀತಿ ಬೆಳೆಸಲಿಕ್ಕಾಗಿ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ) ಕಳೆದ 33 ವರ್ಷಗಳಿಂದ, ಶ್ರೇಷ್ಠ ಕೃತಿಗಳ ಆಯ್ಕೆಗಾಗಿ, ಸಾಹಿತ್ಯ ಸ್ವರ್ಧೆ ಹಮ್ಮಿಕೊಂಡು ಬರುತ್ತಿದೆ. 32 ವರ್ಷದಲ್ಲಿ, 400ಕ್ಕೂ ಹೆಚ್ಚು ಕೃತಿಗಳನ್ನು ಆಯ್ಕೆ ಮಾಡಿ, ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ನೀಡಿ ಲೇಖಕರನ್ನು ಗೌರವಿಸಿ, ಪ್ರೋತ್ಸಾಹಿಸಿದೆ.
ಈ ಸಮಾರಂಭವು 25 - ಡಿಸೆಂಬರ್- 2025ರ ಸಂಜೆ 5.30 ರಿಂದ ರಾತ್ರಿ 9.30 ರವರೆಗೆ, ಬೆಂಗಳೂರಿನಲ್ಲಿ ನಡೆಯಲಿದೆ. 50 ವರ್ಷ ಮೇಲ್ಪಟ್ಟ, ಕನಿಷ್ಟ 10 ವಿವಿಧ ಪ್ರಕಾರಗಳ ಕೃತಿಗಳನ್ನು ರಚನೆ ಮಾಡಿರುವ ಹಿರಿಯ ಲೇಖಕರು ಹಾಗೂ ವಿವಿಧ ಪ್ರಾಕಾರಗಳ 25ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಪ್ರಕಾಶಕರನ್ನು ಕೂಡಾ ಈ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಅರ್ಹರಿರುತ್ತಾರೆ.
ಹಿರಿಯ ಸಾಹಿತಿಗಳನ್ನು ಮತ್ತು ಪ್ರಕಾಶಕರನ್ನು ಗೌರವಿಸಬೇಕೆಂದು, ಅವರ ಕೃತಿಗಳ ಆಯ್ಕೆ ಮಾಡಿ, ಓದುಗರ ಮುಂದೆ ಪ್ರಸ್ತುತ ಪಡಿಸುವುದೆ ಈ ಸಮಾರಂಭದ ವಿಶೇಷ. ಹಲವು ಮೂಲಗಳಿಂದ ನಿಮ್ಮ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಮೇಲಿನ ಅರ್ಹತೆಗಳಲ್ಲಿ ತಮ್ಮನ್ನು ಗುರುತಿಸಲಾಗಿದೆ.
ಸಂಸ್ಥೆ ವಿಶ್ವೇಶ್ವರಯ್ಯ ಆಕರ ಗ್ರಂಥಾಲಯ ಸ್ಥಾಪಿಸಿದ್ದು, ಸದರಿ ಗ್ರಂಥಾಲಯಕ್ಕೆ ನಿಮ್ಮ ಕೃತಿಗಳ ಹೊರತಾಗಿ, ಹೆಚ್ಚಿನ ಬೇರೆ ಬೇರೆ ಪುಸ್ತಕಗಳನ್ನು ದಾನ ಮಾಡಬಹುದು. ಒಟ್ಟಾರೆ ಪುಸ್ತಕಗಳನ್ನು ಕಳುಹಿಸುವವರು, ಹೊರ ಊರಿನವರಾದರೆ ವಿ.ಆರ್.ಎಲ್.(ಗಾಂಧಿನಗರ ಶಾಖೆ) ಅಥವಾ ಎಸ್.ಆರ್.ಎಸ್. (ಆನಂದರಾವ್ ಸರ್ಕಲ್ ಶಾಖೆ) ರೀತಿಯ ಬಸ್ ಪಾರ್ಸೆಲ್ ಮೂಲಕ, ಮೇಲ್ಕಂಡ ವಿಳಾಸಕ್ಕೆ ಕಳುಹಿಸಬಹುದು (ಇದು ಕಡಿಮೆ ಖರ್ಚಿನಲ್ಲಿ ತಲುಪತ್ತೆ) ಅಥವಾ ಬೆಂಗಳೂರಿನವರಾದರೆ ಕರೆ ಮಾಡಿ, ನಾವೇ ಸಂಗ್ರಹ ಮಾಡಿಕೊಳ್ಳುತ್ತೇವೆ.
ಇದು ಗೌರವ ಪ್ರಶಸ್ತಿಯಾಗಿದ್ದು, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಮುತ್ತಿನ ಹಾರ, ಶಾಲು ಮತ್ತು ಬ್ಯಾಡ್ಜ್ ಒಳಗೊಂಡಿರುತ್ತದೆ. ಆಹ್ವಾನ ಪತ್ರಿಕೆ ಮತ್ತು ಸ್ಮರಣ ಸಂಚಿಕೆಯಲ್ಲಿ ಲೇಖಕರ ಫೋಟೋ ಸಮೇತ ವಿವರಗಳು ದಾಖಲಾಗುತ್ತದೆ. ಸಮಾರಂಭದ ಸಂಪೂರ್ಣ ವಿಡಿಯೋ ನಮ್ಮ `ಸುರ್ವೆ ನ್ಯೂಸ್’ ಯು ಟ್ಯೂಬ್ ಚಾನೆಲ್‍ನಲ್ಲಿ ಆಪ್‍ಲೋಡ್ ಸೌಲಭ್ಯವಿರುತ್ತದೆ.
ಪುಸ್ತಕ ಹಾಗೂ 2 ಭಾವಚಿತ್ರ ಮತ್ತು ಬಯೋಡಾಟಾ ಕಳುಹಿಸುವ ವಿಳಾಸ : ರಮೇಶ ಸುರ್ವೆ ಅಧ್ಯಕ್ಷರು, ವಿಶ್ವೇಶ್ವರಯ್ಯ ಪ್ರತಿಷ್ಠಾನ (ರಿ.) ನಂ. 468/ಸುರ್ವೆ, 13ನೇ ಮುಖ್ಯರಸ್ತೆ, 3ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸÉ್ತ, ಮಂಜುನಾಥನಗರ, ಬೆಂಗಳೂರು-560010. ಮೊ : 9845307327. ಬಯೋಡಾಟಾ, ಭಾವಚಿತ್ರ, ದಾನ ಕೊಡುವ ಪುಸ್ತಕಗಳನ್ನು 30-11-2024 ರೊಳಗೆ ಕಳುಹಿಸಲು ಮನವಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್