ಹರಪನಹಳ್ಳಿ, 06 ಜುಲೈ (ಹಿ.ಸ.) :
ಆ್ಯಂಕರ್ : ಹರಪನಹಳ್ಳಿ ಪಟ್ಟಣದ ನಿವಾಸಿ, ದಿವಂಗತ ಪಟೇಲ್ ಬಸವರಾಜ ಗೌಡರ ಧರ್ಮಪತ್ನಿ ಶ್ರೀಮತಿ ಪಟೇಲ್ ಶಾರದಮ್ಮ (86) ಅವರು ಭಾನುವಾರ ಮಧ್ಯಾಹ್ನ ದೈವಾದೀನರಾಗಿದ್ದು, ಮೃತರ ಅಂತ್ಯಕ್ರಿಯೆಯು ಸೋಮವಾರ ಮಧ್ಯಾಹ್ನ ಸ್ವಂತ ಭೂಮಿಯಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು-ಹಿರಿಯರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನೆರವೇರಲಿದೆ.
ಮೃತರಿಗೆ ಮಕ್ಕಳು-ಸೊಸೆಯಂದಿರರು, ಮೊಮ್ಮಕ್ಕಳು, ಇದ್ದಾರೆ. ಮೃತರು ಖ್ಯಾತ ಜವಳಿ ಉದ್ಯಮಿ ದಿವಂಗತ ಬಿ.ಎಸ್. ಚನ್ನಬಸಪ್ಪ ಅವರ ಸಹೋದರಿ.
ವಿವರಗಳಿಗಾಗಿ : ಪಟೇಲ್ ಬೆಟ್ಟನಗೌಡ್ರು ಪಟೇಲ್ ಸಹೋದರರು, ಹರಪನಹಳ್ಳಿ. ಮೊಬೈಲ್ ಸಂಖ್ಯೆ : 9538215615, 9886273364 ಮತ್ತು 7829766880 ಕ್ಕೆ ಸಂಪರ್ಕ ಮಾಡಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್