ಕೊಪ್ಪಳ, 06 ಜುಲೈ (ಹಿ.ಸ.) :
ಆ್ಯಂಕರ್ : ತುಮಕೂರು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಮಾಧ್ಯಮ ಹಬ್ಬದಲ್ಲಿ ಆಯೋಜನೆ ಮಾಡಲಾಗಿದ್ದ ಸ್ಪರ್ಧೆಗಳಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಪತ್ರಿಕೋದ್ಯಮದ ವಿದ್ಯಾರ್ಥಿ ಈರಣ್ಣ ಪಗಡಾಲ ರಾಜ್ಯ ಮಟ್ಟದ ಸುದ್ದಿ ಪ್ರಸ್ತುತಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಪಡೆದು ಪಾರಿತೋಷಕ, ಪ್ರಮಾಣ ಪತ್ರ, ನಗದು ಬಹುಮಾನ ಪಡೆದಿರುತ್ತಾರೆ.
ಪತ್ರಿಕೋದ್ಯಮ ವಿಭಾಗದ ಮತ್ತೊರ್ವ ವಿದ್ಯಾರ್ಥಿ ರಾವುಲ್ ಬೆಲ್ಲದ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಪಾರಿತೋಷಕ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ಗೆದ್ದಿದ್ದಾರೆ, ಪದ್ಮಜಾ ನಾಗಲಪೂರ ಮಠ ಹಾಗೂ ಈರಣ್ಣ ಪಗಡಾಲ್ ಚರ್ಚಾಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳಾದ ಭಾನುಪ್ರಕಾಶ, ನರೇಶ, ಶಿವರಾಜ, ವಿಜಯಕುಮಾರ, ರೇಣುಕಾ, ಸ್ವಾತಿ, ಈರಮ್ಮ, ಪ್ರಮೀಳಾ, ಅಶ್ವಿನಿ, ದೇವರಾಜ,ಹುಲ್ಲೇಶ,ಶೈನಜಾ ಪ್ರಮಾಣ ಪತ್ರ ಪಡೆದಕೊಂಡರು.
ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪಳ ವಿವಿಯ ಕುಲಪತಿ ಪ್ರೊ.ಬಿ.ಕೆ.ರವಿ, ಕುಲಸಚಿವ ಡಾ. ಕೆ.ವಿ.ಪ್ರಸಾದ್, ಆಡಳಿತ ಅಧಿಕಾರಿ ಶ್ರೀ ತಿಮ್ಮಾರೆಡ್ಡಿ, ಹಣಕಾಸು ಅಧಿಕಾರಿ ಅಮೀನ್ ಅತ್ತರ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ರಂಗನಾಥ ಕೋಳೂರು, ಸಂತೋಷಕುಮಾರ.ಎಚ್.ಕೆ, ಶ್ರೀಕಾಂತ ಬಿ, ಹಾಗೂ ವಿಭಾಗಗಳ ಉಪನ್ಯಾಸಕರು ಅಭಿನಂದಿಸಿದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್