ಪಂಢರಪುರದಲ್ಲಿ ಏಕಾದಶಿ ಹಬ್ಬ ಆಚರಣೆ
ವಿಜಯಪುರ, 06 ಜುಲೈ (ಹಿ.ಸ.) : ಆ್ಯಂಕರ್ : ನಮ್ಮ ಭಾರತ ದೇಶ ವಿಶಿಷ್ಟ ಸಂಪ್ರದಾಯಗಳ ಆಚರಣೆಗಳ ಆಗರ. ಇಲ್ಲಿ ಪ್ರತಿ ಹಬ್ಬಕ್ಕೂ, ಪ್ರತಿ ಆಚರಣೆಗೆ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ. ಹೀಗೆಯೇ ಆಷಾಢ ಏಕಾದಶಿಯನ್ನು ಸಂಭ್ರಮ, ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಆಷಾಢ ಏಕಾದಶಿಯನ್ನು ಪಂಢರಪುರ ಏಕಾದಶಿಯನ
ಪಂಢರಪುರದಲ್ಲಿ ಏಕಾದಶಿ ಹಬ್ಬ ಆಚರಣೆ


ವಿಜಯಪುರ, 06 ಜುಲೈ (ಹಿ.ಸ.) :

ಆ್ಯಂಕರ್ : ನಮ್ಮ ಭಾರತ ದೇಶ ವಿಶಿಷ್ಟ ಸಂಪ್ರದಾಯಗಳ ಆಚರಣೆಗಳ ಆಗರ. ಇಲ್ಲಿ ಪ್ರತಿ ಹಬ್ಬಕ್ಕೂ, ಪ್ರತಿ ಆಚರಣೆಗೆ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ. ಹೀಗೆಯೇ ಆಷಾಢ ಏಕಾದಶಿಯನ್ನು ಸಂಭ್ರಮ, ಶ್ರದ್ಧೆಯಿಂದ ಆಚರಿಸಲಾಗುತ್ತದೆ.

ಆಷಾಢ ಏಕಾದಶಿಯನ್ನು ಪಂಢರಪುರ ಏಕಾದಶಿಯನ್ನು ಆಷಾಢ ಏಕಾದಶಿ ಅಥವಾ ಶಯನಿ ಏಕಾದಶಿ ಎಂದೂ ಕರೆಯುತ್ತಾರೆ. ಇದು ಮಹಾರಾಷ್ಟ್ರದ ಪಂಢರಪುರ ದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ.

ಈ ದಿನ, ಭಕ್ತರು ಪಂಢರಪುರದ ವಿಠ್ಠಲ-ರುಕ್ಮಿಣಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ರಾಜ್ಯದ ವಿಜಯಪುರ, ಬೆಳಗಾವಿ, ಬೀದರ, ಗುಲ್ಬರ್ಗ ಹೀಗೆ ಹಲವು ಜಿಲ್ಲೆಗಳಿಂದ ಭಕ್ತರು ವಾರಿಗಳಾಗಿ ಸೇವೆ ಸಲ್ಲಿಸುತ್ತಾರೆ. ಪಂಢರಪುರ ವಾರಿಯ ಸಮಯದಲ್ಲಿ, ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಪಂಢರಪುರಕ್ಕೆ ಬರುತ್ತಾರೆ.

ಪಂಢರಪುರ ಏಕಾದಶಿಯಂದು ಪಂಢರಪುರದಲ್ಲಿ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನದಂದು ಭಕ್ತರು ಪವಿತ್ರ ಭೀಮಾ ನದಿಯಲ್ಲಿ ಸ್ನಾನ ಮಾಡಿ, ವಿಠ್ಠಲನ ದರ್ಶನ ಪಡೆಯುತ್ತಾರೆ.

ಪಂಢರಪುರ ವಾರಿ ಎಂಬುದು ಸಂತ ಜ್ಞಾನೇಶ್ವರ ಮತ್ತು ಸಂತ ತುಕಾರಾಂ ಅವರಂತಹ ಸಂತರು ಪಂಢರಪುರಕ್ಕೆ ಕೈಗೊಳ್ಳುವ ಯಾತ್ರೆಯಾಗಿದೆ. ಈ ಯಾತ್ರೆಯಲ್ಲಿ ಅನೇಕ ಭಕ್ತರು ಪಾಲ್ಗೊಳ್ಳುತ್ತಾರೆ.

ಪಂಢರಪುರ ಏಕಾದಶಿಯಂದು, ಭಕ್ತರು ಭಜನೆಗಳನ್ನು ಹಾಡುತ್ತಾರೆ, ದೇವರ ನಾಮ ಸ್ಮರಣೆ ಮಾಡುತ್ತಾರೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದು ಮಹಾರಾಷ್ಟ್ರ ಹಾಗೂ ಕರ್ನಾಟಕ ಅತ್ಯಂತ ಪ್ರಸಿದ್ಧ ಮತ್ತು ಭಕ್ತಿಪೂರ್ವಕ ಹಬ್ಬಗಳಲ್ಲಿ ಒಂದಾಗಿದೆ. ಇನ್ನೂ ಕನ್ನಡಿಗರೇ ಹೆಚ್ಚಾಗಿರುವ ಫಂಡರಪುರದಲ್ಲಿ ಮರಾಠಿ ನೆಲದಲ್ಲಿ ಕನ್ನಡದ ಕಂಪು ಹರಡಿಸುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande