ರಾಯಚೂರು, 06 ಜುಲೈ (ಹಿ.ಸ.) :
ಆ್ಯಂಕರ್ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೆಂಗಳೂರಿನ ಶ್ರೀ ಸಾಯಿದೀಪ ಇವರ ವತಿಯಿಂದ ಜುಲೈ 8ರ ಬೆಳಿಗ್ಗೆ 10 ಗಂಟೆಗೆ ಕ್ಯಾಂಪಸ್ ಡ್ರೈವ್ ಸಂದರ್ಶನ ಹಮಿಕೊಳ್ಳಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಸ್,ಎಸ್,ಎಲ್,ಸಿ ಅಂಕಪಟ್ಟಿ, ಐಟಿಐ ಪಾಸಾದ ಅಂಕಪಟ್ಟಿ, ಆಧಾರ್ ಕಾರ್ಡ್, ಬಯೋಡಾಟ, 02 ಭಾವಚಿತ್ರಗಳು, ಬ್ಯಾಂಕ್ ಪಾಸ್‍ಬುಕ್, ಗುರುತಿನ ಚೀಟಿ ದಾಖಲಾತಿಗಳೊಂದಿಗೆ ಹಾಜರಾಗಬಹುದಾಗಿದೆ.
ಸಂದರ್ಶನದಲ್ಲಿ ವಿಪೆÇ್ರೀ, ಕವಾಸಕಿ, ಟಿವಿಎಸ್, ಮಹಿಂದ್ರಾ, ಡಿಪಿ ವಡ್ರ್ಲ್, ಜೆಬಿಎಂ, ಯಾಜಕಿ, ಶಕ್ತಿ, ಇಂಡೋ ಸೇರಿದಂತೆ ನಾನಾ ಕಂಪನಿಗಳು ಭಾಗಿಯಾಗಲಿವೆ.
ಐಟಿಐ ಎರಡನೇಯ ವರ್ಷದಲ್ಲಿ ತರಬೇತಿಯನ್ನು ಪಡೆಯುತ್ತಿರುವವರು ಹಾಗೂ 2ನೇ ವರ್ಷವನ್ನು ತೇರ್ಗಡೆಯನ್ನು ಹೊಂದಿರುವ ತರಬೇತಿದಾರರು ಸಂದರ್ಶನ ನೀಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9449185499 ಅಥವಾ 9743304428ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್