ರಾಯಚೂರು, 06 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ವತಿಯಿಂದ 2025-26 ನೇ ಸಾಲಿನ ಜಿಟಿಟಿಸಿಯ ದೀರ್ಘಾವಧಿ ಡಿಎಆರ್ ಕೋಸ್ರ್ನ ಪ್ರವೇಶಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ರಾಯಚೂರು ಭಾಗದ ಯುವಕರಿಗೆ ಉನ್ನತ ಕೌಶಲ್ಯಾಧಾರಿತ ತಾಂತ್ರಿಕ ತರಬೇತಿಗಳನ್ನು ನಡೆಸುತ್ತಿದೆ. ಈ ಸಂಸ್ಥೆಯು ಪ್ರಸಕ್ತ ಸಾಲಿನ ಡಿಎಆರ್ (Diploma In Automation and
Robotics) 3+1 ವರ್ಷದ ಕೋರ್ಸ್ ಎಸ್‍ಎಸ್‍ಎಲ್‍ಸಿ/ ಐಟಿಐ/ ಪಿಯುಸಿ ಸೈನ್ಸ್ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಉಳಿದಿರುವ ಕೆಲವೇ ಸೀಟುಗಳ ಭರ್ತಿಗಾಗಿ ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಪ್ರವೇಶಾತಿ ಪಡೆಯಬಹುದಾಗಿದೆ.
ಈ ಕೋಸ್ರ್ಗಳಿಗೆ ಕರ್ನಾಟಕ ಸರ್ಕಾರ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನ (AICTE) ಯಿಂದ ಮಾನ್ಯತೆ ಪಡೆದಿರುತ್ತದೆ. ಈ ಕೋಸ್ರ್ಗಳು 03+01 ವರ್ಷದ ಅವಧಿಯಾಗಿದ್ದು, ಮೊದಲ 03 ವರ್ಷ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು ನಂತರ 04ನೇಯ ವರ್ಷದಲ್ಲಿ ಪ್ರತಿಷ್ಠತ ಕೈಗಾರಿಕೆಗಳಲ್ಲಿ ಕಡ್ಡಾಯ 01 ವರ್ಷ ಕೈಗಾರಿಕಾ ತರಬೇತಿಗಾಗಿ ಕಳುಹಿಸಲಾಗುವುದು, ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಆಕರ್ಷಕ ಸ್ಪೈಫಂಡ್ ಮತ್ತು ಇನ್ನಿತರ ಸೌಲಭ್ಯಗಳು ದೊರೆಯುತ್ತವೆ. ಈ ಕೋಸ್ರ್ಗಳ ಪ್ರವೇಶಾತಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ 33% ಪ್ರತಿಶತ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ 371 (ಜೆ) ಮೀಸಲಾತಿ ಸೌಲಭ್ಯವಿರುತ್ತದೆ.
ಈ ತರಬೇತಿಯು ಇನ್ನಿತರ ಡಿಪೆÇ್ಲಮಾ ಕೋಸ್ರ್ಗಳಿಗಿಂತ ವಿಭಿನ್ನವಾಗಿದ್ದು, ಹಲವಾರು ವಿಶೇಷತೆಗಳನ್ನು ಹೊಂದಿದ್ದು, ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರತಿಶತ 100ರಷ್ಟು ಉದ್ಯೋಗ ಒದಗಿಸಿ ಕೊಟ್ಟಸಂಸ್ಥೆಯಾಗಿದೆ. ಸಂಸ್ಥೆಯಿಂದ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಇಂದು ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ದೇಶ, ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ವತಃ ಉದ್ಯಮದಾರರಾಗಿ ಅನೇಕ ಉದ್ಯೋಗಿಗಳನ್ನು ಸೃಷ್ಟಿಸಿ ನಿರುದ್ಯೋಗ ಪ್ರಮಾಣವನ್ನು ಇಳಿಕೆ ಮಾಡುತ್ತಿದೆ.
ಎಸ್‍ಎಸ್‍ಎಲ್‍ಸಿ ಪಾಸಾದ ಕ್ರಿಯಾಶೀಲ, ಸೃಜನಶೀಲ ವಿದ್ಯಾರ್ಥಿಗಳಿಗೆ ಈ ಕೋರ್ಸಗಳ ತರಬೇತಿಯ ಸುವರ್ಣಾವಕಾಶವಾಗಿದ್ದು, ಅತ್ಯಂತ ಕಡಿಮೆ ವೆಚ್ಚದಲ್ಲಿ ತಾಂತ್ರಿಕ ಶಿಕ್ಷಣ ನೀಡಿ, ಉದ್ಯೋಗ ದೊರಕಿಸಿಕೊಡುವ ವಿಶಿಷ್ಟ ತರಬೇತಿಗಳಾಗಿವೆ. ಈ ತರಬೇತಿಗಳಿಗೆ ಸೇರುವ ಅರ್ಹ ಅಭ್ಯರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶಿಕ್ಷಣ ಸಾಲದ ಸಹಾಯ ಕೂಡ ದೊರೆಯುತ್ತದೆ. ಆಸಕ್ತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ನೇರವಾಗಿ ಉಪಕೇಂದ್ರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡುವ ಮೂಲಕ ಉಳಿದಿರುವ ಕೆಲವೇ ಸೀಟುಗಳ ಭರ್ತಿಗಾಗಿ ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ಪ್ರವೇಶಾತಿಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9902072101 ಅಥವಾ 7411421775ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಲಿಂಗಸುಗೂರು ಜಿಟಿಟಿಸಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್