ಗ್ರೆನಡಾ, 05 ಜುಲೈ (ಹಿ.ಸ.) :
ಆ್ಯಂಕರ್ : ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟ ರೋಚಕ ತಿರುವು ಪಡೆದುಕೊಂಡಿತು. ಬ್ರಾಂಡನ್ ಕಿಂಗ್ ಅವರ ಅತ್ಯುತ್ತಮ 75 ರನ್‌ಗಳ ಇನ್ನಿಂಗ್ಸ್ ಮತ್ತು ಜೇಡನ್ ಸೀಲ್ಸ್ ಅಂತಿಮ ಕ್ಷಣಗಳಲ್ಲಿ ಪಡೆದ 2 ವಿಕೆಟ್‌ಗಳು ಪಂದ್ಯವನ್ನು ಸಮತೋಲನದ ಸ್ಥಿತಿಗೆ ತಂದಿವೆ.
ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 253 ರನ್‌ಗಳಿಸಿ, ಆಸ್ಟ್ರೇಲಿಯಾದ ಮುನ್ನಡೆಯನ್ನು ಕೇವಲ 33 ರನ್‌ಗಳಿಗೆ ಸೀಮಿತಗೊಳಿಸಿತು. ಆ ಬಳಿಕ ಆಟಕ್ಕೆ ಇಳಿದ ಆಸ್ಟ್ರೇಲಿಯಾ ಕೇವಲ 12 ರನ್‌ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa