ರಾಯಚೂರು : ಜುಲೈ 5, 6ರಂದು ವಿದ್ಯುತ್ ವ್ಯತ್ಯಯ
ರಾಯಚೂರು, 04 ಜುಲೈ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1 ಹಾಗೂ 2ರ ವ್ಯಾಪ್ತಿಗೆ ಬರುವ ಡ್ಯಾಡಿ ಕಾಲೋನಿಯ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ಜುಲೈ 05 ಹಾಗೂ 06ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾ
ರಾಯಚೂರು : ಜುಲೈ 5, 6ರಂದು ವಿದ್ಯುತ್ ವ್ಯತ್ಯಯ


ರಾಯಚೂರು, 04 ಜುಲೈ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1 ಹಾಗೂ 2ರ ವ್ಯಾಪ್ತಿಗೆ ಬರುವ ಡ್ಯಾಡಿ ಕಾಲೋನಿಯ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಪ್ರಯುಕ್ತ ಜುಲೈ 05 ಹಾಗೂ 06ರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ನಿಗದಿತ ದಿನದಂದು ಬೆಳಗ್ಗೆ 10ರಿಂದ ಡ್ಯಾಡಿ ಕಾಲೋನಿ, ಸರ್ಕಾರಿ ಪದವಿ ಕಾಲೇಜು, ಪಿ.ಸಿ.ಬಿ ಕಾಲೋನಿ, ಡುಂಬಾ ಕಾಲೋನಿ, ಸಿಟಿ ಕ್ಲಬ್, ಅಲ್ಲಿ ನಾಯಕ್ ಕಾಲೋನಿ, ಗುರು ಬಸವ ಕಾಲೋನಿ, ಕಾಕತೀಯ ಕಾಲೋನಿ, ಶಾಂತಿ ಕಾಲೋನಿ, ಡಾಲರ್ಸ ಕಾಲೋನಿ, ರಾಯಚೂರು ಒಳ ಚರಂಡಿ ನೀರು ಮತ್ತು ಸಂಬಂಧಿಸಿದ ಪ್ರದೇಶಗಳು ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕಿಸುವಂತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1 ಹಾಗೂ 2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande