ತೆಲಂಗಾಣ ಸಚಿವರುಗಳೊಂದಿಗೆ ಸಚಿವ ಎನ್ಎಸ್ ಬೋಸರಾಜು ಸೌಹಾರ್ದಯುತ ಚರ್ಚೆ
ಹೈದರಾಬಾದ, 4 ಜುಲೈ (ಹಿ.ಸ.) : ಆ್ಯಂಕರ್ : ತೆಲಂಗಾಣ ರಾಜ್ಯ ಸರ್ಕಾರದ ನೀರಾವರಿ ಹಾಗೂ ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಉತ್ತಮ್ ಕುಮಾರ್ ರೆಡ್ಡಿ ಮತ್ತು ಪಶು ಸಂಗೋಪನೆ ಇಲಾಖೆಯ ಸಚಿವರಾದ ವಾಕಿಟಿ ಶ್ರೀಹರಿ ಅವರು ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾದ ಎನ್ ಎಸ್ ಬೋಸರಾಜು ಅವರನ್ನು ಸೌಹಾರ್ದಯುತವಾಗ
ತೆಲಂಗಾಣ ಸಚಿವರುಗಳೊಂದಿಗೆ ಸಚಿವ ಎನ್ಎಸ್ ಬೋಸರಾಜು ಸೌಹಾರ್ದಯುತ ಚರ್ಚೆ


ತೆಲಂಗಾಣ ಸಚಿವರುಗಳೊಂದಿಗೆ ಸಚಿವ ಎನ್ಎಸ್ ಬೋಸರಾಜು ಸೌಹಾರ್ದಯುತ ಚರ್ಚೆ


ಹೈದರಾಬಾದ, 4 ಜುಲೈ (ಹಿ.ಸ.) :

ಆ್ಯಂಕರ್ : ತೆಲಂಗಾಣ ರಾಜ್ಯ ಸರ್ಕಾರದ ನೀರಾವರಿ ಹಾಗೂ ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ಉತ್ತಮ್ ಕುಮಾರ್ ರೆಡ್ಡಿ ಮತ್ತು ಪಶು ಸಂಗೋಪನೆ ಇಲಾಖೆಯ ಸಚಿವರಾದ ವಾಕಿಟಿ ಶ್ರೀಹರಿ ಅವರು ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾದ ಎನ್ ಎಸ್ ಬೋಸರಾಜು ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ತೆಲಂಗಾಣದ ಪಕ್ಷ ಸಂಘಟನಾತ್ಮಕ ವಿಷಯಗಳ ಕುರಿತು ಸೌಹಾರ್ದಯುತವಾಗಿ ಚರ್ಚಿಸಿದರು.

2018 ರಿಂದ ಎಐಸಿಸಿ ಕಾರ್ಯದರ್ಶಿಗಳಾಗಿ ಹಾಗೂ ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ಎನ್ಎಸ್ ಬೋಸರಾಜ್ ರವರು ತೆಲಂಗಾಣದಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆಯೊಂದಿಗೆ ರಾಜಕೀಯ ಹಾಗೂ ಚುನಾವಣೆಯ ತಂತ್ರಗಾರಿಕೆಯ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.

ಹೈದರಾಬಾದಿನಲ್ಲಿ ಕರ್ನಾಟಕ ರಾಜ್ಯ ಸಚಿವರಾದ ಎನ್ ಎಸ್ ಬೋಸರಾಜು ಅವರೊಂದಿಗೆ ಇತ್ತೀಚಿನ ಪಕ್ಷ ಬೆಳವಣಿಗೆ ಹಾಗೂ ಸರ್ಕಾರದ ಜನಪರ ಆಡಳಿತದ ಕುರಿತು ಮಾಹಿತಿ ಪಡೆದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande