ಬಳ್ಳಾರಿ, 04 ಜುಲೈ (ಹಿ.ಸ.) :
ಆ್ಯಂಕರ್ : ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಆರೋಗ್ಯದ ಸಮತೋಲನಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಒಳಗೊಂಡಿದ್ದು, ಹಾಲಿನಲ್ಲಿರುವ ಕ್ಯಾಲಿಯಂ, ಪ್ರೋಟಿನ್, ವಿಟಮಿನ್-ಬಿ2 ಸೇರಿದಂತೆ ಮುಂತಾದ ಪೋಷಕಾಂಶಗಳು ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿದೆ ಎಂದು ರಾಬಕೊವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಪ್ರಭುಶಂಕರ ಅವರು ಹೇಳಿದ್ದಾರೆ.
ನಗರದ ನಂದಿ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವುದು ಅರಿವು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ರಾಬಕೊವಿ ಹಾಲು ಒಕ್ಕೂಟದ ವ್ಯವಸ್ಥಾಪಕ (ಮಾ) ಮೋಹನ್ ಎಲ್.ಶಿಂಧೆ ಅವರು ಮಾತನಾಡಿ, ಡೇರಿ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ರೀತಿಯಲ್ಲಿ ಸಾಧ್ಯವಿರುವ ಉಪಕ್ರಮಗಳ ಬಗ್ಗೆ ಬೆಂಬಲಿಸಲು ಅವಕಾಶ ಒದಗಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ಕುರಿತು ಕ್ವಿಜ್ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಂದಿ ಶಾಲೆಯ ನಿರ್ದೇಶಕ ಕೆ.ಉಮೇರ ಅಹಮ್ಮದ್, ಶಾಲಾ ಪ್ರಾಂಶುಪಾಲರಾದ ಕಕ್ಷನ್ ಜಬೀನ್, ಸಂಯೋಜಕ ಮುನೀರ್ ಶೇಕ್, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ (ಡೇರಿ) ಸಿದ್ದರಾಮಪ್ಪ ಶಿವರಾಯ ಕಣ್ಣೂರ, ವ್ಯವಸ್ಥಾಪಕ ಸಹಾಯಕ ವ್ಯವಸ್ಥಾಪಕ (ಮಾ) ಎರ್ರಿಸ್ವಾಮಿ ರೆಡ್ಡಿ, ಉಪ ವ್ಯವಸ್ಥಾಪಕ (ಗು.ನಿ) ಟಿ.ಮಲ್ಲಿಕಾರ್ಜುನ, ಉಪ ವ್ಯವಸ್ಥಾಪಕ (ಗು.ನಿ) ಟಿ.ಮಲ್ಲಿಕಾರ್ಜುನ, ಪ್ರಭಾರ ಉಪ ವ್ಯವಸ್ಥಾಪಕ (ಖರೀದಿ) ನಾಗರಾಜ ಶರ್ಮಾ, ಮಾರುಕಟ್ಟೆ ಸೂಪರ್‍ವೈಸರ್‍ಗಳಾದ ಲೋಹಿತ್ ಕುಮಾರ್, ಎಲ್.ಪ್ರಸನ್ನ ಕುಮಾರ, ಸಿ.ಎನ್.ಮಂಜುನಾಥ, ಬಾಬು.ಬಿ ಸೇರಿದಂತೆ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.
ಬಳಿಕ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನಂದಿನಿ ಸುವಾಸಿತ ಹಾಲು ವಿತರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್