ರಾಯಚೂರು, 04 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅವಶ್ಯಕವಾದ ಒಟ್ಟು 16 ವಾಹನಗಳು ಜಿಲ್ಲಾ ಮಟ್ಟದ ಕಚೇರಿಗಳಿಗೆ ಹಾಗೂ ತಾಲೂಕು ಮಟ್ಟದಲ್ಲಿ ಆರ್.ಬಿ.ಎಸ್.ಕೆ. ತಂಡಗಳಿಗೆ ವಾಹನಗಳನ್ನು ಸರಬರಾಜು ಮಾಡಲು ಆಯ್ದ ಸಂಸ್ಥೆಗಳಿಂದ ಒಂದು ವರ್ಷದ ಅವಧಿಗೆ ಸೇವೆಯನ್ನು ಒದಗಿಸಲು ಅರ್ಜಿ ಕರೆಯಲಾಗಿದೆ.
ದಿನಾಂಕ : 04.07.2025 ರಿಂದ 18.07.2025ರ ಸಂಜೆ 5:30ರೊಳಗೆ ಅರ್ಜಿಗಳನ್ನು ಇ-ಪ್ರಕ್ಯೂರ್‍ಮೆಂಟ್ ವೆಬ್‍ಸೈಟ್ hಣಣಠಿs://ಞಠಿಠಿಠಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯದ, ಡಿ.ಪಿ.ಎಂ.ಯು. ವಿಭಾಗಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್