ಕುಕನೂರು ನವೋದಯ ವಿದ್ಯಾಲಯ : 6ನೇ ತರಗತಿಗಾಗಿ ಅರ್ಜಿ ಆಹ್ವಾನ
ಕೊಪ್ಪಳ, 04 ಜುಲೈ (ಹಿ.ಸ.) : ಆ್ಯಂಕರ್ : ಕೊಪ್ಪಳ ಜಿಲ್ಲೆಯ ಕುಕನೂರ ಜವಾಹರ ನವೋದಯ ವಿದ್ಯಾಲಯ ವತಿಯಿಂದ ಪ್ರತಿ ಪರ್ಷದಂತೆ ಈ ವರ್ಷವೂ ವಿದ್ಯಾಲಯದ 6ನೇ ತರಗತಿಗಾಗಿ 2026-27ರ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶ ಪರೀಕ್ಷೆಯ ಅರ್ಜಿ ಆಹ್ವಾನಿಸಲಾಗಿದೆ. ಈ ವರ್ಷವೂ ಆನ್‍ಲೈನ್ ವೆಬ್‍ಸೈಟ್ www.navodaya.
ಕುಕನೂರು ನವೋದಯ ವಿದ್ಯಾಲಯ : 6ನೇ ತರಗತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ, 04 ಜುಲೈ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜಿಲ್ಲೆಯ ಕುಕನೂರ ಜವಾಹರ ನವೋದಯ ವಿದ್ಯಾಲಯ ವತಿಯಿಂದ ಪ್ರತಿ ಪರ್ಷದಂತೆ ಈ ವರ್ಷವೂ ವಿದ್ಯಾಲಯದ 6ನೇ ತರಗತಿಗಾಗಿ 2026-27ರ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶ ಪರೀಕ್ಷೆಯ ಅರ್ಜಿ ಆಹ್ವಾನಿಸಲಾಗಿದೆ.

ಈ ವರ್ಷವೂ ಆನ್‍ಲೈನ್ ವೆಬ್‍ಸೈಟ್ www.navodaya.gov.in ನಲ್ಲಿ ಅರ್ಜಿಗಳನ್ನು ನೀಡಲಾಗಿದ್ದು, ಸುಲಭ ಮತ್ತು ಸರಳ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಪೆÇೀಷಕರಿಗೆ ಸಹಾಯವಾಗುವಂತೆ ಇಂಟರ್ನೆಟ್ ಕೇಂದ್ರಗಳಲ್ಲಿ (ಇಂಟರ್ನೆಟ್ ಸೆಂಟರ್) ಅರ್ಜಿಯನ್ನು ಭರ್ತಿ ಮಾಡಬಹುದು.

ಅರ್ಜಿ ಸಲ್ಲಿಸಲು ವಿದ್ಯಾರ್ಥಿಯು 2025-26ರ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿಯಲ್ಲಿ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ಓದುತ್ತಿರಬೇಕು. ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಗಿದ್ದು, 2025ರ ಡಿಸೆಂಬರ್ 13ಕ್ಕೆ ಪ್ರವೇಶ ಪರೀಕ್ಷೆಯ ನಡೆಯಲಿದೆ ಎಂದು ಕುಕನೂರ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande