ಕೋಲಾರ ಹಾಲು ಒಕ್ಕೂಟ ಅಧ್ಯಕ್ಷರ ಚುನಾವಣೆ ಬಿಕ್ಕಟ್ಟು ಬಗೆಹರಿಸಿದ ಮುಖ್ಯಮಂತ್ರಿ
ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರ ಚುನಾವಣೆ ಬಿಕ್ಕಟ್ಟು ಬಗೆಹರಿಸಿದ ಮುಖ್ಯಮಂತ್ರಿ
ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ಕಛೇರಿ


ಕೋಲಾರ, ೦೪ ಜುಲೈ (ಹಿ.ಸ) :

ಆ್ಯಂಕರ್ : ಕೋಲಾರ ಹಾಲು ಉತ್ಪಾಧಕರ ಒಕ್ಕೂಟದ ಅಧ್ಯಕ್ಷರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ.ಕಾAಗ್ರೆಸ್ ಕೋಮುಲ್ ಆಡಳಿತ ಮಂಡಳಿಯಲ್ಲಿ ಬಹುಮತ ಹೊಂದಿದೆ.ಒಟ್ಟು ಹದಿಮೂರು ನಿರ್ದೇಶಕರ ಬಲದ ಪೈಕಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಒಂಬತ್ತು ಮಂದಿ ಆಯ್ಕೆಯಾಗಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಸಹಮತವಿಲ್ಲವಾಗಿದೆ.

ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಮತ್ತು ಮಾಲೂರು ಶಾಸಕ ಕೆ.ವೈ. ನಂಜೇಗೌಡರ ನಡುವೆ ತೀವ್ರ ಬಿನ್ನಾಭಿಪ್ರಾಯ ಎದುರಾಗಿದೆ. ಮೊದಲ ಬಾರಿಗೆ ಕೋಮುಲ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಸ್. ಎನ್.ನಾರಾಯಣಸ್ವಾಮಿ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಇದುವರೆಗೂ ಕೋಲಾರ ಹಾಲು ಉತ್ಪಾಧಕರ ಒಕ್ಕೂಟದ ಅಧ್ಯಕ್ಷ ಸ್ಥಾನ ದಲಿತರಿಗೆ ದೊರೆತಿಲ್ಲ. ಆದ್ದರಿಂದ ತಮಗೆ ಅಧ್ಯಕ್ಷ ಸ್ಥಾನ ನೀಡುವಂತೆ ನಾರಯಣ ಸ್ವಾಮಿ ಪಟ್ಟು ಹಿಡಿದಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರನ್ನು ಬೇಟಿ ಮಾಡಿ ತಮ್ಮ ಹಕ್ಕು ಮಂಡಿಸಿದ್ದಾರೆ. ಸಾಮಾಜಿಕ ನ್ಯಾಯ ಕಲ್ಪಿಸಲು ದಲಿತ ಸಮುದಾಯಕ್ಕೆ ಸೇರಿದ ತಮಗೆ ಅಧ್ಯಕ್ಷ ಸ್ಥಾನ ನೀಡ ಬೇಕು ಎಂದು ಪಟ್ಟು ಹಿಡಿದ್ದಾರೆ.

ಶಾಸಕ ನಂಜೇ ಗೌಡರು ಅಧ್ಯಕ಼ರಾಗಿದ್ದ ಅವಧಿಯಲ್ಲಿ ಕೋಮುಲ್‌ನಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ಅಕ್ರಮಗಳ ತನಿಖೆಯಾಗಬೇಕೆಂದು ಪಟ್ಟುಹಿಡಿದ್ದಾರೆ. ನಾರಾಯಣ ಸ್ವಾಮಿಯವರೊಂದಿಗೆ ಸಚಿವ ಕೆ.ಚ್. ಮುನಿಯಪ್ಪ ಶಾಸಕಿ ರೂಪ ಶಶಿಧರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷಿö್ಮÃ ನಾರಾಯಣ್ ಕಾರ್ಯಾಧ್ಯಕ್ಷ ಊರು ಬಾಗಿಲು ಶ್ರೀನಿವಾಸ್ ದನಿಗೂಡಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಗುಂಪುಗಾರಿಕೆಯಿAದ ನಿಷ್ಢಾವಂತರನ್ನು ಕಡೆಗಣಿಸಲಾಗಿದೆ. ರಮೇಶ್ ಕುಮಾರ್ ಬಣಕ್ಕೆ ಸೇರಿದವರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತಿದ್ಧಾರೆ.ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಹ ಒಂದು ಗುಂಪು ಹೇಳಿದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ನಮ್ಮನ್ನು ಕಡೆಗೆಣೆಸುತ್ತಿದ್ದಾರೆ ಎಂದು ನಾರಾಯಣಸ್ವಾಮಿಯವರು ಮುಖ್ಯ ಮಂತ್ರಿಗಳ ಮುಂದೆ ಆಕ್ರೋಶ ಹೊರಹಾಕಿದರು.

ಒಂದು ಹಂತದಲ್ಲಿ ಶಾಸಕ ಸ್ಥಾನ ಮತ್ತು ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ನಾರಾಯಣಸ್ವಾಮಿಯವರು ಆಕ್ರೋಶಭರಿತರಾಗಿ ಹೇಳಿದ್ದಾರೆ. ನಾರಾಯಣ ಸ್ವಾಮಿಯವರ ಮಾತಿನಿಂದ ವಿಚಲಿತಗೊಂಡ ಮುಖ್ಯಮಂತ್ರಿಗಳೂ ನೀವು ರಾಜೀನಾಮೆ ನೀಡುವ ಅಗತ್ಯವಿಲ್ಲವೆಂದು ಸಮಾಧಾನ ಪಡಿಸಿದರೆಂದು ತಿಳಿದು ಬಂದಿದೆ.

ಕೋಮುಲ್ ಆಡಳಿತ ಮಂಡಲಿಗೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆದಿಲ್ಲ. ಇದರಿಂದಾಗಿ ನಾವು ಇಂತಹವರಿಗೆ ಬೆಂಬಲ ನೀಡಿ ಎಂದು ಹೇಳಲಾಗದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ಸಮಾಧಾನ ಪಡಿಸಿದರೆಂದು ತಿಳಿದು ಬಂದಿದೆ.

ಮತ್ತೊಂದು ಕಡೆ ಎಸ್. ಎನ್. ನಾರಾಯಣಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌ರವರ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವುದಾಗಿ ತಿಳಿದು ಬಂದಿದೆ. ನೀವು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನೀವು ಯಾವ ಸೀಮೆಯ ಉಸ್ತುವಾರಿ ಸಚಿವರು ಎಂದು ಹೇಳುವ ಮೂಲಕ ಬೈರತಿ ಸುರೇಶ್‌ರವರನ್ನು ತರಾಟೆಗೆ ತೆಗೆದುಕೊಂಡರೆ0ದು ತಿಳಿದು ಬಂದಿದೆ. ನಾರಾಯಣ ಸ್ವಾಮಿಯವರ ಮಾತಿನಿಂದ ಸಚಿವ ಸುರೇಶ್‌ರವರು ಗಲಿಬಿಲಿಗೊಂಡರೆ0ದು ತಿಳಿದುಬಂದಿದೆ.

ಮಾಲೂರು ಶಾಸಕ ಕೆ.ವೈ. ನಂಜೇಗೌಡರು ಅವಕಾಶದೊರೆತರೆ ಕೆ.ಎಂ.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಡಿ.ಕೆ ಸುರೇಶ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮಾಜಿ ಸ್ಪಿಕರ್ ರಮೇಶ್ ಕುಮಾರ್ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ನಂಜೇ ಗೌಡರು ಸೇರಿದಂತೆ ಮುಖ್ಯಮಂತ್ರಿಗಳನ್ನು ಪ್ರತ್ಯೇಕವಾಗಿ ಭೆಟಿಮಾಡಿ ಕಾಂಗ್ರೆಸ್ ಬೆಂಬಲಿತ ಏಳು ಮಂದಿ ನಿರ್ದೇಶಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ರವರನ್ನು ಬೇಟಿಮಾಡಿ ಕಾಂಗ್ರೆಸ್‌ನಿ0ದ ಆಯ್ಕೆಯಾದ ಏಳುಮಂದಿ ನಿರ್ದೇಶಕರು ನಂಜೇ ಗೌಡರ ಪರ ಇದ್ದಾರೆ. ಅವರನ್ನು ಕೋಲಾರ ಹಾಲು ಉತ್ಪಾಧಕರ ಅಧ್ಯಕ್ಷರನ್ನಾಗಿ ಮಾಡಿ.ಇಲ್ಲವೆ ಕೆ.ಎಂ.ಎಫ್ ಅಧ್ಯಕ್ಷರನ್ನಾಗಿ ಮಾಡಿ ಎಂದು ಹಕ್ಕು ಮಂಡಿಸಿರುವುದಾಗಿ ತಿಳಿದು ಬಂದಿದೆ.

ಪ್ರತ್ಯೇಕವಾಗಿ ಎರಡು ಬಣಗಳ ವಾದವನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗು ಉಪಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ನಂಜೇ ಗೌಡರು ಕೋಲಾರ ಹಾಲು ಉತ್ಪಾಧಕರ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಹಸಿರು ನಿಶಾನೆ ತೋರಿದರೆಂದು ಕಾಂಗ್ರೆಸ್ ಪಕ್ಷದ ವಿಶ್ವಾಸನೀಯ ಮೂಲಗಳು ತಿಳಿಸಿವೆ. ಮತ್ಯೊಂದು ಕಡೆ ಶಾಸಕ ಎಸ್. ಎನ್. ನಾರಾಯಣ ಸ್ವಾಮಿಯವರನ್ನು ಸಮಾಧಾನಪಡಿಸಲು ಕೆ.ಎಂ. ಎಫ್ ನಿರ್ದೇಶಕರ ಸ್ಥಾನಕ್ಕೆ ನೇಮಕ ಮಾಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದರೆಂದು ತಿಳಿದು ಬಂದಿದೆ. ಈ ಸೂತ್ರಕ್ಕೆ ಎರಡು ಬಣಗಳು ಒಪ್ಪಿರುವುದಾಗಿ ತಿಳಿದು ಬಂದಿದೆ.

ಶನಿವಾರ ಕೋಮುಲ್ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ಗೆ ಬಹುಮತ ಇರುವ ಕಾರಣ ಶಾಸಕ ನಂಜೇಗೌಡ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ. ಅಧ್ಯಕ್ಷರ ಆಯ್ಕೆಯಾದ ನಂತರ ಆಡಳಿತ ಮಂಡಳಿಯಲ್ಲಿ ಠರಾವು ಮಾಡಿ ಕೆಎಂಎಫ್ ನಿರ್ದೇಶಕರನ್ನಾಗಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರನ್ನು ಆಯ್ಕೆ ಮಾಡುವುದು ಖಚಿತವಾಗಿದೆ.

ಚಿತ್ರ : ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ಕಛೇರಿ

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande