ಪಾಕಿಸ್ತಾನದಲ್ಲಿ ಜೆಕ್ ಮಹಿಳಾ ಪರ್ವತಾರೋಹಿ ದುರ್ಮರಣ
ಇಸ್ಲಾಮಾಬಾದ್, 04 ಜುಲೈ (ಹಿ.ಸ.) : ಆ್ಯಂಕರ್ : ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿರುವ ಪ್ರಸಿದ್ಧ ನಂಗಾ ಪರ್ಬತ್ ಪರ್ವತದ ಬೇಸ್ ಕ್ಯಾಂಪ್ ಬಳಿ ಜೆಕ್ ಪ್ರಜೆಯಾದ ಪರ್ವತಾರೋಹಿ ಕೊಲೊಚವಾ ಕ್ಲಾರಾ ಅವರು ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ವರದಿಯಲ್ಲಿ ಆಮ್ಲಜನಕ ಸಿಲಿಂಡರ
Death


ಇಸ್ಲಾಮಾಬಾದ್, 04 ಜುಲೈ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿರುವ ಪ್ರಸಿದ್ಧ ನಂಗಾ ಪರ್ಬತ್ ಪರ್ವತದ ಬೇಸ್ ಕ್ಯಾಂಪ್ ಬಳಿ ಜೆಕ್ ಪ್ರಜೆಯಾದ ಪರ್ವತಾರೋಹಿ ಕೊಲೊಚವಾ ಕ್ಲಾರಾ ಅವರು ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಪ್ರಾಥಮಿಕ ವರದಿಯಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟ ಕಾರಣವೆಂದರೂ, ನಂತರ ಅವರು ಎತ್ತರದಿಂದ ಬಿದ್ದು ಸಾವನ್ನಪ್ಪಿರುವುದು ದೃಢವಾಗಿದೆ.

ಅವರು ಕ್ಯಾಂಪ್ 1 ಮತ್ತು 2 ನಡುವಿನ ಪ್ರದೇಶದಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆ ಆರಂಭವಾಗಿದೆ.

ಕ್ಲಾರಾ ತಮ್ಮ ತಂಡದೊಂದಿಗೆ ಜೂನ್ 15ರಿಂದ ಚಿಲಾಸ್‌ನಲ್ಲಿ ತಂಗಿದ್ದರು. ಜೂನ್ 17ರಂದು ಬೊನ್ನರ್ ಬೇಸ್ ಕ್ಯಾಂಪ್ ತಲುಪಿದ್ದರು.

ನಂಗಾ ಪರ್ಬತ್, 8,126 ಮೀ ಎತ್ತರದ ಈ ಪರ್ವತವು 'ಕಿಲ್ಲರ್ ಪರ್ವತ' ಎಂದು ಹೆಸರಾಗಿದೆ. 1953ರಲ್ಲಿ 30ಕ್ಕೂ ಹೆಚ್ಚು ಪರ್ವತಾರೋಹಿಗಳು ಸಾವನ್ನಪ್ಪಿದ್ದರಿಂದ ಈ ಅಡ್ಡಹೆಸರು ಬಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande