ಬಳ್ಳಾರಿ, 04 ಜುಲೈ (ಹಿ.ಸ.) :
ಆ್ಯಂಕರ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ “ಸಾಂಸ್ಕೃತಿಕ ಸೌರಭ” ಕಾರ್ಯಕ್ರಮವನ್ನು ಜು.13 ರಂದು ಸಂಜೆ 06 ಗಂಟೆಗೆ ಕಂಪ್ಲಿ ತಾಲ್ಲೂಕಿನ ರಾಮಸಾಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ.
ಬಳ್ಳಾರಿ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶಾಸಕ ಜೆ.ಎನ್ ಗಣೇಶ್ ಅವರು ಅಧ್ಯಕ್ಷತೆ ವಹಿಸುವರು.
ಸಂಸದರಾದ ಈ.ತುಕಾರಾಂ, ಕೆ.ರಾಜಶೇಖರ ಬಸವರಾಜ ಹಿಟ್ನಾಳ್, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಬಿ.ನಾಗೇಂದ್ರ, ವಿಧಾನಪರಿಷತ್ ಶಾಸಕ ಡಾ.ಚಂದ್ರಶೇಖರ್ ಬಿ.ಪಾಟೀಲ, ಶಾಸಕರಾದ ಬಿ.ಎಂ.ನಾಗರಾಜ, ನಾರಾ ಭರತ್ ರೆಡ್ಡಿ, ಈ.ಅನ್ನಪೂರ್ಣ, ವಿಧಾನಪರಿಷತ್ ಶಾಸಕರಾದ ಶಶೀಲ್ ನಮೋಶಿ, ವೈ.ಎಂ.ಸತೀಶ್, ಡಾ.ಬಾಬು ಜಗಜೀವನ್‍ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ , ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ರಾಮಸಾಗರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ.ಆಶಾ, ಉಪಾಧ್ಯಕ್ಷ ಆರ್.ಎಂ.ರಾಮಯ್ಯ, ರಾಮಸಾಗರದ ಶಾಲಾ ಅಭಿವೃದ್ಧಿ ನಿರ್ವಹಣಾ ಸಮಿತಿಯ ಅಧ್ಯಕ್ಷ ಎಂ.ಪ್ರಶಾಂತ್ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮಕ್ಕು ಮುನ್ನ ಅಂದು ಸಂಜೆ 05 ಗಂಟೆಗೆ ಸಾಂಸ್ಕøತಿಕ ಸೌರಭದ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯು ರಾಮಸಾಗರದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದವರೆಗೆ ನಡೆಯಲಿದೆ.
*ಸಾಂಸ್ಕೃತಿಕ ಕಾರ್ಯಕ್ರಮಗಳು:*
ಕಾರ್ಯಕ್ರಮದಲ್ಲಿ ಬಳ್ಳಾರಿಯ ಮೋಹನ್ ಕಲಬುರಗಿ ಅವರಿಂದ ವಾಯಲಿನ್ ವಾದನ, ಕೆ.ದೊಡ್ಡಬಸಪ್ಪ ಗವಾಯಿ ತಂಡದಿಂದ ಸುಗಮ ಸಂಗೀತ, ವನಮಾಲ ಕುಲಕರ್ಣಿ ಸಂಗಡಿಗರಿಂದ ಸಮೂಹ ನೃತ್ಯ, ಯಲ್ಲನಗೌಡ ಶಂಕರಬಂಡೆ ತಂಡದಿಂದ ಜಾನಪದ ಗೀತೆ, ಏಳುಬೆಂಚಿಯ ಸಿ.ಎಂ.ಕರುಣಾಮೂರ್ತಿ ಅವರಿಂದ ಕಥಾ ಕೀರ್ತನೆ, ಬಳ್ಳಾರಿಯ ವರಲಕ್ಷ್ಮೀ ಸಂಗಡಿಗರಿಂದ ಐತಿಹಾಸಿಕ “ಹೇಮರೆಡ್ಡಿ ಮಲ್ಲಮ್ಮ” ನಾಟಕ, ಕಂಪ್ಲಿಯ ಶಿಕಾರಿ ರಾಮು ಸಂಗಡಿಗರಿಂದ ತಾಷರಂಡೋಲ್, ಹಳೇ ದರೋಜಿಯ ವೈ.ಮಲ್ಲಿಕಾರ್ಜುನಪ್ಪ ಸಂಗಡಿಗರಿಂದ ಹಗಲುವೇಷ, ತಾರನಗರದ ಎಸ್.ಎಂ.ಚಂದ್ರಯ್ಯ ಸ್ವಾಮಿ ತಂಡದಿಂದ ವೀರಗಾಸೆ ಸೇರಿದಂತೆ ಇತರೆ ಸಾಂಸ್ಕ್ರತಿಕ ಕಾರ್ಯಕ್ರಮಗಳು ಇರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್