ಕೇಂದ್ರ ಸರ್ಕಾರದ ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮ ಯಶಸ್ವಿ
ಗದಗ, 04 ಜುಲೈ (ಹಿ.ಸ.) : ಆ್ಯಂಕರ್ : ಕೃಷಿಯಲ್ಲಿ ಮಣ್ಣು ಆರೋಗ್ಯವು ಪ್ರಮುಖ ಪಾತ್ರ ವಹಿಸಿದ್ದು, ಸಮತೋಲನ ಗೊಬ್ಬರ ಬಳಕೆ ಮತ್ತು ಮಣ್ಣು ಆರೋಗ್ಯದ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ರೈತರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು “ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮದ” ಮಣ್ಣ
ಪೋಟೋ


ಗದಗ, 04 ಜುಲೈ (ಹಿ.ಸ.) :

ಆ್ಯಂಕರ್ : ಕೃಷಿಯಲ್ಲಿ ಮಣ್ಣು ಆರೋಗ್ಯವು ಪ್ರಮುಖ ಪಾತ್ರ ವಹಿಸಿದ್ದು, ಸಮತೋಲನ ಗೊಬ್ಬರ ಬಳಕೆ ಮತ್ತು ಮಣ್ಣು ಆರೋಗ್ಯದ ಬಗ್ಗೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ರೈತರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು “ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮದ” ಮಣ್ಣು ಆರೋಗ್ಯ ಕಾರ್ಡ ಯೋಜನೆಯನ್ನು ಶಾಲೆಗಳಿಗೆ ಪರಿಚಯಿಸಿದೆ. ಈ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಮಣ್ಣು ಮಾದರಿ ಸಂಗ್ರಹಣೆ, ಮಣ್ಣು ಪರೀಕ್ಷೆ ಮತ್ತು ಮಣ್ಣು ಆರೋಗ್ಯ ಕಾರ್ಡಗಳನ್ನು ಅರ್ಥೈಸುವ ಕುರಿತು ತರಬೇತಿಯನ್ನು ನೀಡಲಾಗುತ್ತದೆ. ಅಲ್ಲದೇ, ಸ್ಥಳೀಯ ಕೃಷಿಕ ಸಮಾಜದ ಪಾಲ್ಗೊಳ್ಳುವಿಕೆಯಿಂದ ಶಾಲೆ ಮತ್ತು ರೈತರ ನಡುವೆ ಸಮನ್ವಯ ನಿರ್ಮಾಣವಾಗಲಿದೆ.

ಈ ನಿಟ್ಟಿನಲ್ಲಿ “ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮ” ಮತ್ತು ರಾಜ್ಯ ಸರ್ಕಾರದ ಸಹಯೋಗದ ಪ್ರಮುಖ ಯೋಜನೆಯಾಗಿದೆ. ಸದರಿ ಕಾರ್ಯಕ್ರಮವು 2024-25 ನೇ ಸಾಲಿನಿಂದ ಅನುಷ್ಠಾನವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ 42 ಕೇಂದ್ರೀಯ ವಿದ್ಯಾಲಯಗಳು ಹಾಗೂ ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಂಡಿದೆ. ಜಿಲ್ಲೆಯಲ್ಲಿ ಸದರಿ ಕಾರ್ಯಕ್ರಮವನ್ನು ಜವಾಹರಲಾಲ್ ನೆಹರು ವಿದ್ಯಾಲಯ, ಸಾ::ಕೊರ್ಲಹಳ್ಳಿ, ತಾ::ಮುಂಡರಗಿಯಲ್ಲಿ ಅನುಷ್ಠಾನಗೊಳಿಸಲಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿ, ಪ್ರತಿ ಗುಂಪುಗಳಿಂದ ನಿಗದಿತ ಸಂಖ್ಯೆಯ ಮಣ್ಣು ಮಾದರಿಗಳನ್ನು ಸಂಗ್ರಹಿಸಿ, ನುರಿತ ವಿಶ್ಲೇಷಕರು ಮತ್ತು ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಂದ ಮಾದರಿಗಳನ್ನು ವಿಶ್ಲೇಷಿಸಲಾಗುತ್ತದೆ. ವಿಶ್ಲೇಷಣಾ ಫಲಿತಾಂಶಗಳನ್ನು ಮಣ್ಣು ಆರೋಗ್ಯ ಚೀಟಿಗಳ ಮೂಲಕ ಸಂಬAಧಿಸಿದ ರೈತರಿಗೆ ನೀಡಲಾಗುತ್ತದೆ. 2024-25ರಲ್ಲಿ ಸದರಿ ಕಾರ್ಯಕ್ರಮದಡಿ 50 ರೈತರ ತಾಕುಗಳ ಮಣ್ಣು ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಮಣ್ಣು ಆರೋಗ್ಯ ಚೀಟಿಗಳನ್ನು ನೀಡಲಾಗಿದೆ.

ಪ್ರಸಕ್ತ ಸಾಲಿನಲ್ಲಿಯೂ ರಾಜ್ಯದಲ್ಲಿ ಕಾರ್ಯಕ್ರಮ ಮುಂದುವರೆದಿದ್ದು, ಪಿ.ಎಂ.ಶ್ರೀ. ಶಾಲೆಗಳಿಗೂ ವಿಸ್ತರಿಸಲು ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಸದರಿ ಕಾರ್ಯಕ್ರಮದಡಿ 50 ಮಣ್ಣು ಮಾದರಿಗಳನ್ನು ಸಂಗ್ರಹಿಸುವ ಗುರಿಯಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande