ಹೊಸಪೇಟೆ, 04 ಜುಲೈ (ಹಿ.ಸ.) :
ಆ್ಯಂಕರ್ : 2025-26 ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ಯೋಜನೆಯಡಿ ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿಕಲಚೇತನ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಮಾಂಜನೇಯ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ತಾಲೂಕಿನ ಶಾಲಾ, ಕಾಲೇಜುಗಳಲ್ಲಿನ ವಿಕಲಚೇತನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ವೆಬ್‍ಸೈಟ್ ವಿಳಾಸ https://ssp.postmatric.karnataka.gov.in/homepage.aspx ಹಾಗೂ
https://postmatric.karnataka.gov.in/post.sa/signing.asppre/ ನಲ್ಲಿ ಮೆಟ್ರಿಕ್ ಪೂರ್ವ ನೋಂದಣಿ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೂ https://ssp.postmatric.karnataka.gov.in/postsa/signin.aspx/ ನಲ್ಲಿ ನೋಂದಣಿ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕು ವಿವಿದೊದ್ದೇಶ ಪುರ್ನವಸತಿ ಕಾರ್ಯಕರ್ತರನ್ನು ಹಾಗೂ ಗ್ರಾಮೀಣ ಪುನರ್ವಸತಿ ಯೋಜನೆಯ ಜಿಲ್ಲಾ ಸಂಯೋಜಕರನ್ನು ಸಂಪರ್ಕಿಸಬಹುದಾಗಿದೆ. ವಿಜಯನಗರ ನಾಗರಾಜ.ಡಿ 9901738353, ಹೊಸಪೇಟೆ ರವಿಕುಮಾರ 9945252991, ಹೂವಿನಹಡಗಲಿ ಮಂಜುನಾಥ 9900890403, ಹರಪನಹಳ್ಳಿ ಧನರಾಜ್ 9110246455, ಹಗರಿಬೊಮ್ಮನಹಳ್ಳಿ ಲಕ್ಷ್ಮಣ 9741185924, ಕೊಟ್ಟೂರು ಟಿ.ಲಕ್ಷ್ಮೀ 8296859012 ಹಾಗೂ ಕೂಡ್ಲಿಗಿ ಚೌಡೇಶ್ 9731747832 ಸಂಪರ್ಕಿಸಬಹುದು.
ವಿಕಲಚೇತನ ಸಹಾಯವಾಣಿ ಮತ್ತು ಮಾಹಿತಿ ಸಲಹಾ ಕೇಂದ್ರ ದೂರವಾಣಿ ಸಂಖ್ಯೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳ ಕಚೇರಿ. ಆಗಾಫೆ ಎಜಿ ಪ್ರಾರ್ಥನಾಲಯ ಎದುರು, ರಸ್ತೆ, ರವಿ ಸಿವಿಲ್ ಎಂಜಿನಿಯರ್ ಕಟ್ಟಡ, ಅಮರಾವತಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್