ಗದಗ, 04 ಜುಲೈ (ಹಿ.ಸ.) :
ಆ್ಯಂಕರ್ : ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಶ್ರೀ ಅನೀಲ ಪಟ್ಟಣಶೆಟ್ಟಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.
ಕಾರ್ಯಕ್ರಮದಲ್ಲಿ ಗಣ್ಯ ಉದ್ಯಮಿಗಳಾದ ಶ್ರೀ ಅನೀಲ ಪಟ್ಟಣಶೆಟ್ಟಿಯವರು ಮಾತನಾಡಿ, ಸಮಾಜದಲ್ಲಿ ಅವಕಾಶವಂಚಿತ ವಿಶೇಷ ಮಕ್ಕಳಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ, ಅವರವರ ಸಾಮಥ್ರ್ಯಗೆ ತಕ್ಕಂತೆ ತರಬೇತಿ ನೀಡಿ, ಸಮಾಜದ ಮುಖ್ಯವಾಹಿನಿಗೆ ತರುತ್ತಿರುವ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯವಾಗಿದೆ. ಇಂದು ನನ್ನ ಹುಟ್ಟುಹಬ್ಬವನ್ನು ಸ್ವರ್ಗದಲ್ಲಿಯೇ ಆಚರಿಸಿಕೊಂಡಷ್ಟು ಸಂತೋಷವಾಗಿದೆ. ದೇವರ ಸ್ವರೂಪಿಗಳಾದ ಈ ಮಕ್ಕಳ ಆಶೀರ್ವಾದ ನಮಗೆ ದೊರೆತ್ತಿದ್ದರಿಂದ ನಮ್ಮೆಲ್ಲಾ ಕಷ್ಠಗಳೂ ಇಂದಿಗೆ ದೂರವಾದವೆಂದು ಭಾವುಕರಾಗಿ ಹೇಳುತ್ತಾ, ನಿಸ್ವಾರ್ಥ ಸೇವೆ ಮಾಡುತ್ತಿರುವ ಈ ಸಂಸ್ಥೆಗೆ ನನ್ನ ಸಹಾಯ ನೀಡುವುದರೊಂದಿಗೆ ಹಾಗೂ ಎಲ್ಲ ದಾನಿಗಳಿಂದ ಸಹಾಯ-ಸಹಕಾರ ಕೊಡಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಕೀರ್ತಿ ಪಟ್ಟಣಶೆಟ್ಟಿ ಮಾತನಾಡಿ, ದೇವರು ಯಾವ ದೇವಸ್ಥಾನ ಇಲ್ಲಾ ಇಲ್ಲಿಯೇ ಇದ್ದಾನೆ, ದಿವ್ಯಾಂಗರಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ. ಅವರನ್ನು ವೈಜ್ಞಾನಿಕವಾಗಿ ಶಿಕ್ಷಣ ಹಾಗೂ ತರಬೇತಿ ನೀಡಿ, ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸುವ ಹಾಗೆ ಮಾಡಿ, ಅವರಲ್ಲಿ ಸೂಪ್ತವಾದ ಶಕ್ತಿಯನ್ನು ಹೊರತರುವ ಈ ಸೇವಾ ಕಾರ್ಯ ದೇವರು ಮೆಚ್ಚುವಂತಹದ್ದು, ಈ ಸೇವಾ ಕಾರ್ಯಕ್ಕೆ ನಿರಂತರವಾಗಿ ಸಹಾಯ-ಸಹಕಾರ ನೀಡುವುದಾಗಿ ಹೇಳುತ್ತಾ, ಇಂದು ದೇವರ ಸ್ವರೂಪಿಳಾದ ವಿಶೇಷ ಮಕ್ಕಳೊಂದಿಗೆ ನನ್ನ ಪತಿಯವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿ.ಜಿ.ಎಂ ಆಯುರ್ವೇದಿಕ ಕಾಲೇಜಿನ ಡಾ.ಬೂದೀಶ, ರಾಣಾಸರ್, ಬಸವರಾಜಸರ್‍ವರುಗಳು ಮಾತನಾಡಿ, ಸಮಾಜದಲ್ಲಿ ಅತೀ ಅವಶ್ಯಕವಾದ & ಕಷ್ಟಕರ ಸೇವೆಯನ್ನು ಕೈಗೆತ್ತಿಗೊಂಡು ವಿಶೇಷ ಮಕ್ಕಳಿಗೆ ತಾಳ್ಮೆಯಿಂದ ತರಬೇತಿ ನೀಡುತ್ತಿರುವ ವಿಶ್ವ ಕಲ್ಯಾಣ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯ. ಈ ಸೇವಾ ಕಾರ್ಯವನ್ನು ನಾವು ನಿವೆಲ್ಲಾ ಸೇರಿ ಮೇಲತ್ತುವುದರೊಂದಿಗೆ ಸಹಾಯ-ಸಹಕಾರ ಮಾಡೋಣವೆಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರ ಪ್ರಾಸ್ತವಿಕವಾಗಿ ಮಾತನಾಡಿ, ತಮ್ಮ ಹುಟ್ಟುಹಬ್ಬದ ನಿಮಿತ್ಯ ದೇವರ ಸ್ವರೂಪಿಗಳಾದ ಈ ಮಕ್ಕಳಿಗೆ ಸಿಹಿಯೊಂದಿಗೆ ಊಟದ ವ್ಯವಸ್ಥೆ ಮಾಡಿ, ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಎಂದು ಹೇಳಿದ ಶ್ರೀ ಅನೀಲ ಪಟ್ಟಣಶೆಟ್ಟಿ ಹಾಗೂ ಕುಟುಂಬಸ್ಥರು ನಮ್ಮ ಸೇವಾ ಕಾರ್ಯಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ. ಇವರಿಗೆ ಭಗವಂತ ಸಕಲ ಇಷ್ಟಾರ್ಥಗಳನ್ನು ಹಾಗೂ ಆಯುರ್ ಆರೋಗ್ಯವನ್ನು ಕರಣಿಸಲೆಂದು ಹಾರೈಸಿ, ಕೃತಜ್ಞತೆಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಎಲ್ಲ ವಿಶೇಷ ಮಕ್ಕಳೊಂದಿಗೆ ಶ್ರೀ ಅನೀಲ ಪಟ್ಟಣಶೆಟ್ಟಿ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿ, ಸಿಹಿಯೊಂದಿಗೆ ಊಟದ ವ್ಯವಸ್ಥೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಶ್ರೀಮತಿ ಕೀರ್ತಿ ಶ್ರೀ ಅನೀಲ ಪಟ್ಟಣಶೆಟ್ಟಿ ದಂಪತಿಗಳಿಗೆ ವಿಶೇಷ ಮಕ್ಕಳು ಹಾಗೂ ಸಿಬ್ಬಂದಿಗಳು ಶ್ಯಾಲು ಹೊದಿಸಿ ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ನೀಡಿದರು.
ಸಿದ್ದಲಿಂಗವ್ವ ಪಟ್ಟಣಶೆಟ್ಟಿ, ಚಂದ್ರಶೇಖರ ಮಟ್ಟಿ, ರತ್ನಾ ಚಂದ್ರಶೇಖರ ಮಟ್ಟಿ, ಪ್ರವೀಣ ರುದ್ರಸ್ವಾಮಿಮಠ, ವಿರೇಶ ಮಾನ್ವಿ, ವಿಜಯ ಮಟ್ಟಿ, ಮಲ್ಲನಗೌಡ ಪಾಟೀಲ, ಶಂಕರಗೌಡ ಪಾಟೀಲ ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು, ಕೊನೆಗೆ ಎಲ್ಲರಿಗೂ ಸಿಹಿಯೊಂದಿಗೆ ಊಟವನ್ನು ಬಡಿಸಿದರು. ಆಗಮಿಸಿದೆಲ್ಲರೂ ವಿಶೇಷ ಮಕ್ಕಳಿಗೆ ಸಿಹಿಯೊಂದಿಗೆ ಊಟವನ್ನು ತಿನ್ನಿಸಿದ್ದು ತುಂಬಾ ವಿಶೇಷವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / Lalita MP