ಮೈಸೂರು, 04 ಜುಲೈ (ಹಿ.ಸ.) :
ಆ್ಯಂಕರ್ : ಆಷಾಢ ಮಾಸದ ಎರಡನೇ ಶುಕ್ರವಾರದ ನಿಮಿತ್ತ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ಭಕ್ತರ ಸಾಗರ ಹರಿದುಬಂದಿದ್ದು, ಬೆಳಗಿನ ಜಾವದಿಂದಲೇ ದೇವಿಗೆ ವಿಶೇಷ ಪೂಜೆ ನೆರವೇರಿತು.
ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ಪತ್ನಿ ಸಮೇತ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಕಳೆದ ಆಷಾಢದಲ್ಲಿ ಜೈಲಿನಲ್ಲಿ ಇದ್ದ ಕಾರಣ ದರ್ಶನ್ ಭೇಟಿ ನೀಡಲಾಗಿಲ್ಲ. ಈ ಬಾರಿ ಅವರು ಕುಟುಂಬದೊಂದಿಗೆ ಆಗಮಿಸಿದ್ದು, ದೇವಿಗೆ ನಮನ ಸಲ್ಲಿಸಿದರು.
ದರ್ಶನ್ ಕಾರು ಚಾಮುಂಡಿ ಬೆಟ್ಟಕ್ಕೆ ಬಂದ ಕೂಡಲೆ ಅಭಿಮಾನಿಗಳು ಸುತ್ತುವರಿದು “ಡಿಬಾಸ್” ಘೋಷಣೆ ಹಾಕಿದರು. ದರ್ಶನ್ ಕೈ ಮುಗಿದು ಅಭಿಮಾನಿಗಳಿಗೆ ವಂದನೆ ಸಲ್ಲಿಸಿ ದೇವಾಲಯದೊಳಗೆ ಪ್ರವೇಶಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa