ಯಲಬುರ್ಗಾ: ಪಿ.ಓ.ಪಿ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ ನಿಷೇಧ
ಯಲಬುರ್ಗಾ, 31 ಜುಲೈ (ಹಿ.ಸ.) : ಆ್ಯಂಕರ್ : ಯಲಬುರ್ಗಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಆಗಸ್ಟ್ 27 ರಂದು ಜರುಗುವ ಗ
ಯಲಬುರ್ಗಾ: ಪಿ.ಓ.ಪಿ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ ನಿಷೇಧ


ಯಲಬುರ್ಗಾ, 31 ಜುಲೈ (ಹಿ.ಸ.) :

ಆ್ಯಂಕರ್ : ಯಲಬುರ್ಗಾ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.

ಆಗಸ್ಟ್ 27 ರಂದು ಜರುಗುವ ಗಣೇಶ ಚತುರ್ಥಿ ಪ್ರಯುಕ್ತ ನೀರಿನ ಮೂಲಗಳಲ್ಲಿ ಗಣೇಶನ ಮೂರ್ತಿಗಳನ್ನು ವಿಸರ್ಜನೆ ಮಾಡುವ ಸಂದರ್ಭದಲ್ಲಿ ಉಂಟಾಗುವ ಜಲಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಯಲಬುರ್ಗಾ ಪಟ್ಟಣ ಪಂಚಾಯತ್ ವತಿಯಿಂದ ಕೆಲವು ಮಾರ್ಗಸೂಚಿಯನ್ನು ಜಾರಿಗೊಸಲಾಗಿದೆ.

ಮಾರ್ಗಸೂಚಿಗಳು: ರೋಗ ನಿರೋಧಕ ಶಕ್ತಿ ಇರುವ ಚಿಕ್ಕದಾದ ಮಣ್ಣಿನ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡುವುದು. ಕೆರೆ, ಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣೇಶ ಮೂರ್ತಿ ಆರಾಧನೆಗಾಗಿ ಉಪಯೋಗಿಸುವ ವಸ್ತುಗಳನ್ನು (ಹೂವು, ಹಾರ, ವಸ್ತು, ಅಲಂಕಾರ ಸಾಮಗ್ರಿ ಇತ್ಯಾದಿ) ಜೈವಿಕವಾಗಿ ವಿಘಟನೆಯಾಗುವ ಪದಾರ್ಥಗಳನ್ನು ಬಳಸಿ ತಯಾರಿಸಬೇಕು.

ಗಣೇಶ ಚತುರ್ಥಿ ಸಂದರ್ಭದಲ್ಲಿ ಪಿ.ಒ.ಪಿ ಗಣೇಶ, ಪ್ಲಾಸ್ಟಿಕ್ ಬಳಕೆ, ಪಟಾಕಿ ಸಿಡಿಸುವುದು ಧ್ವನಿ ವರ್ಧಕಗಳ ಬಳಕೆ ಮತ್ತು ಕಸವನ್ನು ರಸ್ತೆಗೆ ಬಿಸಾಡುವುದು ಮುಂತಾದ ಚಟುವಟಿಕೆಗಳ ಮೇಲೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಹಾಗೂ ಏಕೆ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕು. ಕೆರೆ, ಬಾವಿ, ಹೊಂಡ, ನದಿಯ ಹತ್ತಿರ ಮಣ್ಣಿನ ಗಣೇಶ ಮೂರ್ತಿಯನ್ನು ವಿಸರ್ಜಿಸಲು ನಗರ ಸ್ಥಳೀಯ ಸಂಸ್ಥೆಯಿಂದ ಕೃತಕ ವ್ಯವಸ್ಥೆಯನ್ನು ಬ್ಯಾರಲ್‌ಗಳು ಹಾಗೂ ಕೃತಕ ಅಥವಾ ತಾತ್ಕಲಿಕ ನೀರಿನ ಹೊಂಡದ ವ್ಯವಸ್ಥೆ ಮಾಡಲಾಗುವುದು.

ಮೂರ್ತಿ ವಿಸರ್ಜಿಸುವ ಸ್ಥಳಗಳಲ್ಲಿ ಘನತ್ಯಾಜ್ಯ ವಸ್ತುಗಳನ್ನು ಯಾವುದೇ ಕಾರಣಕ್ಕೂ ಸುಡವಂತಿಲ್ಲ. ಸಾದ್ಯವಾದಷ್ಟು ಅರಿಶಿಣ ಅಥವಾ ಜೇಡಿ ಮಣ್ಣಿನಿಂದ ತಯಾರಿಸಿದ ಚಿಕ್ಕದಾದ ಮತ್ತು ಬಣ್ಣ ರಹಿತ ಮೂರ್ತಿಗಳನ್ನು ಪೂಜಿಸಲು ಕೊಪ್ಪಳ ನಗರದ ನಿವಾಸಿಗಳು ಸಹಕರಿಸಬೇಕು. ಬಣ್ಣ ಇರುವ ಗಣೇಶನ ಮೂರ್ತಿಗಳನ್ನೇ ಪೂಜಿಸುವುದಾದರೆ ನೀರಿನಲ್ಲಿ ಕರಗುವ ಬಣ್ಣಗಳು ಮತ್ತು ವಿಷಯುಕ್ತವಲ್ಲದ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ತಯಾರಿಸಿದ ಮೂರ್ತಿಗಳನ್ನು ಬಳಸಿ ಜಲ ಮೂಲಗಳಿಗೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಸಾರ್ವಜನಿಕರು ಸಹಕರಿಸುವಂತೆ ಯಲಬುರ್ಗಾ ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande