ಸಹಕಾರ ಸಂಘಗಳ ಸಮಾಪನೆಗೊಳಿಸಲು ಆಕ್ಷೇಪಣೆಗೆ ಅರ್ಜಿ ಆಹ್ವಾನ
ರಾಯಚೂರು, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ರಾಯಚೂರು ಉಪ ವಿಭಾಗದ ಸಹಕಾರ ಸಂಘಗಳು ಸ್ಥಗಿತಗೊಂಡಿದ್ದು, ಇವುಗಳನ್ನು ಸಮಾಪನೆಗೊಳಿಸಲು ಸದಸ್ಯರಿಂದ ಅಥವಾ ಸಾರ್ವಜನಿಕರಿಂದ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳು, ಹಲವು ವರ್ಷಗಳಿಂದ ಸಂಘದ ಉದ್ದೇಶಿತ ಕ
ಸಹಕಾರ ಸಂಘಗಳ ಸಮಾಪನೆಗೊಳಿಸಲು ಆಕ್ಷೇಪಣೆಗೆ ಅರ್ಜಿ ಆಹ್ವಾನ


ರಾಯಚೂರು, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ರಾಯಚೂರು ಉಪ ವಿಭಾಗದ ಸಹಕಾರ ಸಂಘಗಳು ಸ್ಥಗಿತಗೊಂಡಿದ್ದು, ಇವುಗಳನ್ನು ಸಮಾಪನೆಗೊಳಿಸಲು ಸದಸ್ಯರಿಂದ ಅಥವಾ ಸಾರ್ವಜನಿಕರಿಂದ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿದೆ.

ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳು, ಹಲವು ವರ್ಷಗಳಿಂದ ಸಂಘದ ಉದ್ದೇಶಿತ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವುದರಿಂದ ಸಂಘಗಳನ್ನು ಸಮಾಪನೆಗೊಳಿಸಬೇಕಿದೆ. ಈ ಸಂಘಗಳನ್ನು ಸಮಾಪನೆಗೊಳಿಸಲು ಸದಸ್ಯರಿಂದ ಅಥವಾ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅದನ್ನು ಸಮರ್ಥಿಸುವ ದಾಖಲೆಗಳ ಸಹಿತವಾಗಿ ಈ ನೋಟೀಸು ಪ್ರಕಟಗೊಂಡ ಹದಿನೈದು (15) ದಿನಗಳೊಳಗಾಗಿ ಸಹಕಾರ ಸಂಘಗಳ ಸಂಬಂಧಪಟ್ಟ ಸಹಕಾರ ಸಂಘಗಳ ಸಹಾಯಕ ನಿಬಂಧಕರು ರಾಯಚೂರು ಇವರಿಗೆ ಸಲ್ಲಿಸಬಹುದಾಗಿದೆ. ನಿಗಧಿತ ಕಾಲಾವಧಿಯಲ್ಲಿ ಯಾವುದೇ ಆಕ್ಷೇಪಣೆ ಮತ್ತು ಅದನ್ನು ಸಮರ್ಥಿಸುವ ದಾಖಲೆಗಳ ಸಹಿತ ಸಲ್ಲಿಸದಿದ್ದಲ್ಲಿ ಯಾವುದೇ ಆಕ್ಷೇಪಣೆ ಇಲ್ಲ ಎಂದು ಪರಿಗಣಿಸಿ ಸ್ಥಗಿತ ಸಹಕಾರ ಸಂಘಗಳ ಸಮಾಪನೆಗಾಗಿ ಕ್ರಮವಹಿಸಲಾಗುವುದು.

ಸ್ಥಗಿತವಾದ ಸಹಕಾರ ಸಂಘಗಳ ವಿವರ: ರಾಯಚೂರು ಸಹಕಾರ ಇಲಾಖೆ ನೌಕರರ ಪತ್ತಿನ ಸಹಕಾರ ಸಂಘ ನಿ, ರಾಯಚೂರು ನೋಂದಣಿ ಸಂಖ್ಯೆ:250 ದಿನಾಂಕ:01-09-1965., ಚಲುವಾದಿ ನೌಕರರ ಪತ್ತಿನ ಸಹಕಾರ ಸಂಘ ನಿ, ರಾಯಚೂರು ನೋಂದಣಿ ಸಂಖ್ಯೆ:25517 ದಿನಾಂಕ:23-03-2010., ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ನಿ, ಮಟಮಾರಿ ನೋಂದಣಿ ಸಂಖ್ಯೆ:9780 ದಿನಾಂಕ:10-10-1983., ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ ನಿ, ಉಡಮಗಲ್ ಖಾನಾಪೂರು ನೋಂದಣಿ ಸಂಖ್ಯೆ:9798 ದಿನಾಂಕ:31-01-1986., ಶ್ರೀರಾಮನಗರ ಕ್ಯಾಂಪ್ (ಜಾನಕಿರಾಮಯ್ಯ ಕ್ಯಾಂಪ್) ಹಾಲು ಉತ್ಪಾದಕರ ಸಹಕಾರ ಸಂಘ ನಿ, ಶ್ರೀರಮನಗರ ಕ್ಯಾಂಪ್ ನೋಂದಣಿ ಸಂಖ್ಯೆ:31809 ದಿನಾಂಕ:16-02-2006., ಗೋನಾಲ ಹಾಲು ಉತ್ಪಾದಕರ ಸಹಕಾರ ಸಂಘ ನಿ ವಿಜಯನಗರ ಕ್ಯಾಂಪ್ ನೋಂದಣಿ ಸಂಖ್ಯೆ:11919 ದಿನಾಂಕ:02-12-1986., ಹಾಲು ಉತ್ಪಾದಕರ ಸಹಕಾರ ಸಂಘ ನಿ, ಜಯನಗರಕ್ಯಾಂಪ್ ನೋಂದಣಿ ಸಂಖ್ಯೆ:15165 ದಿನಾಂಕ:05-09-1990., ಸೂರ್ಯಬಾಬು ಕ್ಯಾಂಪ್ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ.ಸೂರ್ಯಬಾಬು ಕ್ಯಾಂಪ್ ನೋಂದಣಿ ಸಂಖ್ಯೆ:31823 ದಿನಾಂಕ:16-10-2006., ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ, ರಾಜಲಬಂಡಾ ನೋಂದಣಿ ಸಂಖ್ಯೆ:49421 ದಿನಾಂಕ:24-06-2020., ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ, ಸೂರ್ಯನಗರ ಕ್ಯಾಂಪ್ ನೋಂದಣಿ ಸಂಖ್ಯೆ:15200 ದಿನಾಂಕ:28-01-1995., ರಾಯಚೂರು ಪೆÇಲೀಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿ, ರಾಯಚೂರು ನೋಂದಣಿ ಸಂಖ್ಯೆ:22406 ದಿನಾಂಕ:31-12-1997., ರಾಘವೇಂದ್ರ ಗೃಹ ನಿರ್ಮಾಣ ಸಹಕಾರ ಸಂಘ ನಿ, ರಾಯಚೂರು ನೋಂದಣಿ ಸಂಖ್ಯೆ:13859 ದಿನಾಂಕ:12-10-1986., ಬಸವೇಶ್ವರ ಗೃಹ ನಿರ್ಮಾಣ ಸಹಕಾರ ಸಂಘ ನಿ, ರಾಯಚೂರು ನೋಂದಣಿ ಸಂಖ್ಯೆ:18 ದಿನಾಂಕ:22-07-1963., ಶ್ರೀರಾಮನಗರ ಗೃಹ ನಿರ್ಮಾಣ ಸಹಕಾರ ಸಂಘ ನಿ, ರಾಯಚೂರು ನೋಂದಣಿ ಸಂಖ್ಯೆ:8438 ದಿನಾಂಕ:22-08-1973ರ ಸಹಕಾರ ಸಂಘಗಳನ್ನು ಸಮಾಪನೆಗಾಗಿ ಕ್ರಮವಹಿಸಲಾಗುವುದು ಎಂದು ರಾಯಚೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande