ಸಾಲಬಾದೆ ಕುಕನೂರು ರೈತ ಆತ್ಮಹತ್ಯೆ
ಕುಕನೂರು, 31 ಜುಲೈ (ಹಿ.ಸ.) : ಆ್ಯಂಕರ್ : ಸಾಲಬಾದೆ ಮತ್ತು ಸಕಾಲಕ್ಕೆ ಮಳೆಯಾಗದೆ ಮೆಕ್ಕೆಜೋಳ ಬೆಳೆ ಕೈಕೊಟ್ಟಿದ್ದರಿಂದ ಮನನೊಂದು ಅರಕೇರಿ ಗ್ರಾಮದ ರೈತ ದೇವಪ್ಪ ನೀರಳ್ಳಿ (51) ತನ್ನ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅರಕೇರಿ ಗ್ರಾಮದ ದೇವಪ್ಪ ನೀರಳ್ಳಿ ಶಿ
ಸಾಲಬಾದೆ ಕುಕನೂರು ರೈತ ಆತ್ಮಹತ್ಯೆ


ಕುಕನೂರು, 31 ಜುಲೈ (ಹಿ.ಸ.) :

ಆ್ಯಂಕರ್ : ಸಾಲಬಾದೆ ಮತ್ತು ಸಕಾಲಕ್ಕೆ ಮಳೆಯಾಗದೆ ಮೆಕ್ಕೆಜೋಳ ಬೆಳೆ ಕೈಕೊಟ್ಟಿದ್ದರಿಂದ ಮನನೊಂದು ಅರಕೇರಿ ಗ್ರಾಮದ ರೈತ ದೇವಪ್ಪ ನೀರಳ್ಳಿ (51) ತನ್ನ ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಅರಕೇರಿ ಗ್ರಾಮದ ದೇವಪ್ಪ ನೀರಳ್ಳಿ ಶಿರೂರು ಕೆನರಾ ಬ್ಯಾಂಕ್ ನಲ್ಲಿ 2.5 ಲಕ್ಷ ಮತ್ತು ಇತರ ಕಡೆ ಗುಂಪು ಸಾಲವಾಗಿ ಸುಮಾರು ಒಂದು ಲಕ್ಷ ಸಾಲ ಮಾಡಿಕೊಂಡಿದ್ದ. ತಾನು ಬೆಳೆದ ಮೆಕ್ಕೆಜೋಳ ಸರಿಯಾಗಿ ಮಳೆ ಆಗದೇ ಬೆಳೆ ಹಾನಿಯಾದ ಪರಿಣಾಮ ಮಾನಸಿಕವಾಗಿ ಕುಗ್ಗಿ, ತೋಟದಲ್ಲಿ ಹೋಗಿ ಕ್ರಿಮಿನಾಶಕ ಸೇವಿಸಿ ಗುರುವಾರಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತಂತೆ ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande