ಬಳ್ಳಾರಿ ನಗರ : ಆ.03 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ, 31 ಜುಲೈ (ಹಿ.ಸ.) : ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 220/11ಕೆವಿ ಅಲ್ಲಿಪುರ ವಿದ್ಯುತ್ ಉಪ-ಕೇಂದ್ರದಲ್ಲಿ 20 ಎಂವಿಎ ಟ್ರಾನ್ಸಫಾರ್ಮರ್ ನ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಹಾಗೂ ಈ ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್ ಲೈನುಗಳ ನಿರ್ವ
ಬಳ್ಳಾರಿ ನಗರ : ಆ.03 ರಂದು ವಿದ್ಯುತ್ ವ್ಯತ್ಯಯ


ಬಳ್ಳಾರಿ, 31 ಜುಲೈ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 220/11ಕೆವಿ ಅಲ್ಲಿಪುರ ವಿದ್ಯುತ್ ಉಪ-ಕೇಂದ್ರದಲ್ಲಿ 20 ಎಂವಿಎ ಟ್ರಾನ್ಸಫಾರ್ಮರ್ ನ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಹಾಗೂ ಈ ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್ ಲೈನುಗಳ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದ ಆ.03 ರಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜುನಲ್ಲಿ ವ್ಯತ್ಯಯವಾಗಲಿದೆ.

*ವಿದ್ಯುತ್ ವ್ಯತ್ಯವಾಗುವ ಪ್ರದೇಶಗಳು:*

ಎಫ್-34 ವ್ಯಾಪ್ತಿಯ ರೈಲ್ವೆ ಫಸ್ಟ್ ಗೇಟ್, ಕೊರಚ ಸ್ಟ್ರಿಟ್, ಉರ್ದು ಟ್ರೈನಿಂಗ್ ಸ್ಕೂಲ್, ಕಡಪಗೆರೆ, ಟೈಲರ್ ಸ್ಟ್ರಿಟ್, ವಡ್ಡೆ ನಾಗಪ್ಪ ಕಾಲೋನಿ, ತಿಲಕ್ ನಗರ್, ವಿನಾಯಕ ನಗರ, ಐಶ್ವರ್ಯ ಕಾಲೋನಿ, ಐಟಿಐ ಕಾಲೇಜ್, ರೇಡಿಯೋ ಪಾರ್ಕ್, ಕೌಲ್ ಬಜಾರ್ ಮೇನ್ ರೋಡ್.

ಎಫ್-35 ರ ಜಲ ಶುದ್ಧೀಕರಣ ಕೇಂದ್ರ. ಎಫ್-36 ರ ಬಂಡಿಹಟ್ಟಿ, ಆಶ್ರಯ ಕಾಲೋನಿ, ಈದ್ಗ ರೋಡ್, ಟೀಚರ್ಸ್ ಕಾಲೋನಿ, ಜಾಗೃತಿ ನಗರ ಸರ್ಕಲ್, ಆಜಾದ್ ನಗರ.

ಎಫ್-40 ರ ಕುವೆಂಪು ನಗರ, ರಾಮಾಂಜನೇಯ ನಗರ, ಸಿ.ಎಮ್.ಸಿ ಕಾಲೋನಿ, ಎಕ್ಸ್ ಸರ್ವಿಸ್‍ಮೆನ್ ಕಾಲೋನಿ. ಎಫ್-72 ರ ಕಂಟೋನ್ ಮೆಂಟ್, ಸೂರ್ಯ ಕಾಲೋನಿ, ತಿಲಕ್ ನಗರ, ಸುಧಾ ಕ್ರಾಸ್, ನಂದಿ ಕಾಲೋನಿ, ಹೆಚ್.ಆರ್.ಜಿ ಕಾಲೋನಿ, ಜಯ ನಗರ, ರಹಿಮಬಾದ್ ಕಾಲೋನಿ, ನಲಂದ ಕಾಲೇಜ್, ವಿಜಯನಗರ ಕಾಲೋನಿ, ಕೆ.ಹೆಚ್.ಬಿ ಕಾಲೋನಿ, ಜಗನ್ನಾಥ ಮಂದಿರ, ಭಾಸ್ಕರ ನಾಯ್ಡು ಸ್ಟ್ರೀಟ್, ಸೆಂಟ್ ಜೋಸೆಫ್ ಸ್ಕೂಲ್, ಬೆಳಗಲ್ ಕ್ರಾಸ್ , ಚಂದ್ರ ಕಾಲೋನಿ, ಎಂ.ಕೆ.ಗಡಂಗ್.

ಎಫ್-75 ರ ಟ್ರಾಮಾ ಕೇರ್ ಸೆಂಟರ್, ಗೋಪಾಲಗೌಡ ನಗರ. ಎಫ್-76 ಅರಣ್ಯ ಕ್ವಾಟರ್ಸ್, ಜಾಗೃತಿ ನಗರ, ರೇಷ್ಮೆ ಇಲಾಖೆ, ಟೀಚರ್ಸ್ ಕಾಲೋನಿ, ಈದ್ಗ ಮೈದಾನ, ರಾಮಂಜನೇಯ ನಗರ ಕಾಲೋನಿ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande