ಯೂರಿಯಾ ಗೊಬ್ಬರಕ್ಕಾಗಿ ಬಿಜೆಪಿ ಪ್ರತಿಭಟನೆ
ಗದಗ, 31 ಜುಲೈ (ಹಿ.ಸ.) : ಆ್ಯಂಕರ್ : ಕೇಂದ್ರ ಸರ್ಕಾರ ಸಾಕಷ್ಟು ಯೂರಿಯಾ ಗೊಬ್ಬರವನ್ನು ರಾಜ್ಯ ಸರ್ಕಾರಕ್ಕೆ ನೀಡಿದರೂ ಅದನ್ನು ಸರಿಯಾಗಿ ರೈತರಿಗೆ ವಿತರಿಸದೆ ಇದ್ದುದರಿಂದ ಬಿಜೆಪಿ ಗದಗ ಶಹರ ಹಾಗು ಗ್ರಾಮೀಣ ಮಂಡಲ ಹಾಗು ರೈತ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಉಗ್ರವಾದ ಪ್ರತಿಭಟನೆಯನ್ನು ಗದಗ ನ
ಪೋಟೋ


ಗದಗ, 31 ಜುಲೈ (ಹಿ.ಸ.) :

ಆ್ಯಂಕರ್ : ಕೇಂದ್ರ ಸರ್ಕಾರ ಸಾಕಷ್ಟು ಯೂರಿಯಾ ಗೊಬ್ಬರವನ್ನು ರಾಜ್ಯ ಸರ್ಕಾರಕ್ಕೆ ನೀಡಿದರೂ ಅದನ್ನು ಸರಿಯಾಗಿ ರೈತರಿಗೆ ವಿತರಿಸದೆ ಇದ್ದುದರಿಂದ ಬಿಜೆಪಿ ಗದಗ ಶಹರ ಹಾಗು ಗ್ರಾಮೀಣ ಮಂಡಲ ಹಾಗು ರೈತ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಉಗ್ರವಾದ ಪ್ರತಿಭಟನೆಯನ್ನು ಗದಗ ನಗರದ ಗಾಂಧಿ ವೃತ್ತದಲ್ಲಿ ನಡೆಸಿದರು. ಹಾಗು 10 ನಿಮಿಷಗಳ ಕಾಲ ರಸ್ತಾರೊಖೊ ಮಾಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

ಬಿಜೆಪಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ಮಾತನಾಡಿ ವಿಜ್ಞಾನಿಗಳು ಮಳೆ ಎಷ್ಟು ಆಗುತ್ತದೆ ಎಂಬುದರ ಬಗ್ಗೆ ಮೊದಲೇ ರಾಜ್ಯ ಸರ್ಕಾರಕ್ಕೆ ತಿಳಿಸಿದರು ಕೃಷಿ ಸಚಿವ ಚಲವರಾಯಸ್ವಾಮಿರವರು ಯಾವುದೇ ಮುಂಜಾಗೂರತೆ ಕ್ರಮವನ್ನು ಕೈಗೊಳ್ಳದೆ ಇರುವುದರಿಂದ ಇಷ್ಟೊಂದು ಗೊಬ್ಬರದ ಕೊರತೆಯಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ನಡುವೆ ಹಗ್ಗ ಜಗ್ಗಾಟ ನಡೆದಿದ್ದು ಇದರಿಂದ ಚಿಕ್ಕ ಹಾಗು ಮಧ್ಯಮ ರೈತರಿಗೆ ಬಹಳಷ್ಟು ತೊಂದರೆಯಾಗಿದೆ. ಕೇಂದ್ರ ಸರ್ಕಾರ ಪೂರೈಸಿದ ಯೂರಿಯಾ ಗೊಬ್ಬರವನ್ನು ಕಾಂಗ್ರೇಸ್ ಪುಡಾರಿಗಳು ಗೊಬ್ಬರವನ್ನು ಕಾಳು ಸಂತೆಯಲ್ಲಿ ಮಾರಾಟ ಮಾಡಿರುವರು. ಶ್ರೀಮಂತ ಕಾಂಗ್ರೇಸ್ ರೈತರ ಮನೆಯಲ್ಲಿ ನೂರಾರು ಚಿಲ ಯೂರಿಯಾ ಗೊಬ್ಬರ ಇರುತ್ತದೆ. ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಗೊಂಡು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹೆಚ್ಚುವರಿ ಗೊಬ್ಬರವನ್ನು ರೈತರಿಗೆ ಮುಟ್ಟಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠರವರು ಮಾತನಾಡಿ ಕೇಂದ್ರ ಸರ್ಕಾರ ಮುಂಗಾರು ಹಂಗಾಮಿಗಾಗಿ ಸಾಕಷ್ಟು ಯೂರಿಯಾ ಗೊಬ್ಬರವನ್ನು ಪೂರೈಸಿದರೂ ರಾಜ್ಯ ಸರ್ಕಾರ ಅದನ್ನು ಸರಿಯಾಗಿ ರೈತರಿಗೆ ಮುಟ್ಟಿಸದೆ ಘೋರ ಅನ್ಯಾಯವನ್ನು ಮಾಡಿರುವರು. ಸಣ್ಣ ಹಾಗು ಅತೀ ಸಣ್ಣ ರೈತರಿಗೆ ಇದರಿಂದ ಬಹಳಷ್ಟು ತೊಂದರೆಯಾಗಿದ್ದು ಇದರಿಂದ ಇಳುವರಿ ಕುಂಟಿತಗೊಳ್ಳಲಿದೆ. ಈ ವರ್ಷ ಮುಂಗಾರ ಹಂಗಾಮಿನಲ್ಲಿ ಸಾಕಷ್ಟು ಮಳೆಯಾಗಿದ್ದು ಅದಕ್ಕೆ ತಕ್ಕಂತೆ ಗೊಬ್ಬರದ ಸ್ಟಾಕ್‍ನ್ನು ಇಡದೆ ರೈತರಿಗೆ ತೊಂದರೆಯನ್ನು ಮಾಡಿರುವರು. ಹಿಂದೆ ಯಡಿಯೂರಪ್ಪನವರು ಆಡಳಿತದಲ್ಲಿದ್ದಾಗ ಗೊಬ್ಬರ ಖರೀದಿಗಾಗಿ 1 ಸಾವಿರ ಕೋಟಿ ರೂಪಾಯಿ ಆವರ್ಥ ನಿಧಿಯನ್ನಾಗಿ ಇಟ್ಟಿದ್ದರು ಆದರೆ ಈಗಿನ ಕಾಂಗ್ರೇಸ್ ಸರ್ಕಾರದಲ್ಲಿ ಕೇವಲ 400 ಕೋಟಿ ರೂಪಾಯಿಗಳನ್ನು ಇಟ್ಟಿದ್ದರಿಂದ ಹೆಚ್ಚಿನ ಗೊಬ್ಬರವನ್ನು ದಾಸ್ತಾನು ಮಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಎಸ್.ಕರೀಗೌಡ್ರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ, ಗದಗ ನಗರ ಮಂಡಲ ಅಧ್ಯಕ್ಷರಾದ ಸುರೇಶ ಮರಳಪ್ಪನವರ, ಗ್ರಾಮೀಣ ಮಂಡಲ ಅಧ್ಯಕ್ಷರಾದ ಬೂದಪ್ಪ ಹಳ್ಳಿ, ಪ್ರಮುಖರಾದ ರವಿ ದಂಡಿನ, ಭದ್ರೇಶ ಕುಸ್ಲಾಪೂರ, ಬಸವಣ್ಣೆಪ್ಪ ಚಿಂಚಲಿ, ಜಗನ್ನಾಥಸಾ ಭಾಂಡಗೆ, ನಿರ್ಮಲಾ ಕೊಳ್ಳಿ, ನಗರ ರೈತ ಮೋರ್ಚಾ ಅಧ್ಯಕ್ಷ ಶಂಕರ ಕರಬಿಷ್ಠಿ, ಗ್ರಾಮೀಣ ಅಧ್ಯಕ್ಷ ಸಿದ್ದಪ್ಪ ಜೊಂಡಿ ಸಂದರ್ಭೊಚಿತವಾಗಿ ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಶ್ರೀಪತಿ ಉಡುಪಿ, ಸಿದ್ದು ಪಲ್ಲೇದ, ಅನೀಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ನಿಂಗಪ್ಪ ಮಣ್ಣೂರ, ಚಂದ್ರು ತಡಸದ, ನಾಗರಾಜ ತಳವಾರ, ಶಶಿಧರ ದಿಂಡೂರ, ಮಹೇಶ ಶಿರಹಟ್ಟಿ, ರಾಜು ಕುಲಕರ್ಣಿ, ಉಷಾ ದಾಸರ, ವಿದ್ಯಾವತಿ ಗಡಗಿ, ಲಕ್ಷ್ಮೀ ಕಾಕಿ, ವಿಜಯಲಕ್ಷ್ಮೀ ಮಾನ್ವಿ, ರೇಖಾ ಬಂಗಾರಶೆಟ್ಟರ, ಪದ್ಮಮಿನಿ ಮುತ್ತಲದಿನ್ನಿ, ವಾಯ್.ಪಿ.ಅಡ್ನೂರ, ಪಕ್ಕೀರಪ್ಪ ಗೋಡಿ, ಕೆ.ಪಿ.ಕೋಟಿಗೌಡ್ರ, ರಾಚಯ್ಯ ಹೊಸಮಠ, ಗುರುಶಾಂತಗೌಡ ಮರೀಗೌಡ್ರ, ಅಮರನಾಥ ಗಡಗಿ, ರಮೇಶ ಸಜ್ಜಗಾರ, ಅಶೋಕ ಕರೂರ, ಅರವಿಂದ ಕೇಲೂರ, ಶಂಕರ ಕಾಕಿ, ನವೀನ ಕೊಟೆಕಲ್, ರಾಹುಲ ಸಂಕಣ್ಣವರ, ಕುಮಾರ ಮಾರನಬಸರಿ, ಶೇಖಣ್ಣ ಕನ್ಯಾಳ, ಸಂಜೀವ ಖಟವಟೆ, ದೇವೆಂದ್ರಪ್ಪ ಹೂಗಾರ, ಪಂಚಾಕ್ಷರಿ ಅಂಗಡಿ, ಅರವಿಂದ ಅಣ್ಣಿಗೇರಿ, ಸುರೇಶ ಹೆಬಸೂರ, ಬಸವರಾಜ ಮಡಿವಾಳರ, ಗಂಗಾಧರ ಮೇಲಗಿರಿ, ಶಂಕರ ಮಲ್ಲಸಮುದ್ರಾ, ಬಸವರಾಜ ಹಲಾಪೂರ, ಭಾಗಪ್ಪ ವಗ್ಗರ, ಈರಣ್ಣ ಗಡಗಿ, ಮಂಜುನಾಥ ಹಳ್ಳೂರಮಠ, ಈರಣ್ಣ ಅಂಗಡಿ, ಮಹಾದೇವಪ್ಪ ಚಿಂಚಲಿ, ನಿಂಗಪ್ಪ ಬೂಶಿಯವರ, ಪ್ರೀತಿ ಶಿವಪ್ಪಯ್ಯನಮಠ, ಕಮಲಾಕ್ಷೀ ಗೊಂದಿ, ಯೋಗೇಶ್ವರಿ ಭಾವಿಕಟ್ಟಿ, ಸ್ವಾತಿ ಅಕ್ಕಿ, ಸುಮಂಗಲಾ ಕೊನೆವಾಲ, ಕಮಲಾಕ್ಷೀ ತೆಕ್ಕಲಕೋಟಿ, ಸಾವಿತ್ರಿ ಪಾಟೀಲ, ಸೋಮಣ್ಣ ಪುರದ, ಪ್ರಭು ಕಲ್ಬಂಡಿ, ಮಲ್ಲಪ್ಪ ಕರಿಬಿಷ್ಠಿ, ವೀರಣ್ಣ ಗಡಗಿ, ಸೋಮಣ್ಣ ನಡೂರ, ಜಡಿಯಪ್ಪ ಲದ್ದಿ, ಮಾಂತೇಶ ಕಾತರಕಿ, ಮಂಜುನಾಥ, ವಿನೋದ ಹಂಸನೂರ ಹಾಗೂ ಇನ್ನೂ ಹಲವಾರು ರೈತರು, ಪ್ರಮುಖರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande