ಕುರೇಕುಪ್ಪ, 31 ಜುಲೈ (ಹಿ.ಸ.) :
ಆ್ಯಂಕರ್ : ಕುರೇಕುಪ್ಪ ಪುರಸಭೆ ವತಿಯಿಂದ ಕುರೇಕುಪ್ಪ ಪಟ್ಟಣದ ವ್ಯಾಪ್ತಿಗೆ ಒಳಪಡುವ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡ ಜನಾಂಗದವರಿಗೆ ಹಾಗೂ ಪುರಸಭೆಯ ಪೌರಕಾರ್ಮಿಕರಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ ಜಮೀನುಗಳಿಗೆ ಸಂಬಂಧಿಸಿದ ಅಸಕ್ತಿಯುಳ್ಳ ಜಮೀನು ಮಾಲೀಕರಿಂದ ಜಮೀನು ಖರೀದಿಗಾಗಿ ಅರ್ಜಿ ಅಹ್ವಾನಿಸಲಾಗಿದೆ.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಮುನಿಸಿಪಾಲಿಟಿ ಯೋಜನೆ ಹಂತ-4ರಲ್ಲಿ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಅನುದಾನದಲ್ಲಿ ಶೇ 24.10 ಯೋಜನೆಯಡಿ ಈ ಸೌಲಭ್ಯ ಒದಗಿಸಲಾಗುತ್ತಿದ್ದು, ಪುರಸಭೆಯ ಕಚೇರಿಯ ಅವಧಿಯಲ್ಲಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಯನ್ನು ಸಂಪರ್ಕಸಿ ಅರ್ಜಿಗಳನ್ನು ಪಡೆದು ಭರ್ತಿಮಾಡಿ ಆಗಸ್ಟ್ 16 ರೊಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು.
ಬೇಕಾದ ದಾಖಲೆಗಳು:
ಅರ್ಜಿ ನಮೂನೆ, ಆರ್ ಟಿ ಸಿ/ಪಹಣಿ, ಆಸ್ತಿಗೆ ಸಂಬಂಧಿತ ದಾಖಲಾತಿಗಳು(ಪಟ್ಟ/ಖರೀದಿ/ಅವಾರ್ಡ್ ಲ್ಯಾಂಡ್/ಇತರೆ), ವಂಶ ವೃಕ್ಷ, ಆಧಾರ್ ಕಾರ್ಡ್, ವೊಟರ್ ಐಡಿ ಮತ್ತು ರೇಷನ್ ಕಾರ್ಡ್, ಎರಡು ಭಾವಚಿತ್ರ ಸಲ್ಲಿಸಬೇಕು ಎಂದು ಕುರೇಕುಪ್ಪ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್