ರಾಯಚೂರು, 01 ಆಗಸ್ಟ್ (ಹಿ.ಸ.) :
ಆ್ಯಂಕರ್ : ಸರ್ಕಾರದ ನಡುವಳಿಯಂತೆ ಮರು ವಿನ್ಯಾಸಗೊಳಿಸಿದ ಹವಾಮಾನ ಅಧಾರಿತ ಬೆಳೆ ವಿಮೆ ಯೋಜನೆ 2025ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಅಧಿಸೂಚಿತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ನೀರಾವರಿ ಪ್ರದೇಶದ ಹಸಿ ಮೆಣಸಿನಕಾಯಿ ದಾಳಿಂಬೆ ಮತ್ತು ಮಾವು ಬೆಳೆಗೆ ವಿಮಾ ಮಾಡಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಸಿ ಮೆಣಸಿನಕಾಯಿ(ನೀರಾವರಿ.) ಬೆಳೆಗೆ ಪ್ರತಿ ಹೆಕ್ಟರ್ ವಿಮಾ ಮೊತ್ತ 71000 ರೂ ಗಳಿದ್ದು, ವಿಮಾ ಕಂತಿನ ಮೊತ್ತ 3550 ರೂ. ಗಳಿರುತ್ತದೆ. ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ 127000 ರೂ. ಗಳಾಗಿದ್ದು, ವಿಮಾ ಕಂತಿನ ಮೊತ್ತ 6350 ರೂ ಗಳಿರುತ್ತದೆ ಮತ್ತು ಮಾವು ಬೆಳೆಗಾರರಿಗೆ ಪ್ರತಿ ಹೆಕ್ಟರ್‍ಗೆ ವಿಮಾ ಮೊತ್ತ 80000 ರೂ.ಗಳಾಗಿದ್ದು, ವಿಮಾ ಕಂತಿನ ಮೊತ್ತ 4000 ರೂ, ಗಳಿರುತ್ತದೆ.
ಬೆಳೆ ಸಾಲ ಪಡೆದಿರುವ ಮತ್ತು ಪಡೆಯದ ರೈತರು ವಿಮೆ ಕಂತು ಕಟ್ಟಲು ಹತ್ತಿರದ ರಾಷ್ಟೀಕೃತ ಬ್ಯಾಂಕುಗಳಿಗೆ ಅಥವಾ ಹತ್ತಿರದ ಕಂಪ್ಯೂಟರ್ ಸೇವಾ ಕೇಂದ್ರಗಳಲ್ಲಿ ನಿಗಧಿತ ಅರ್ಜಿಗಳೊಂದಿಗೆ ಭೂ ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ ಪುಸ್ತಕ, ಆಧಾರ್ ಕಾರ್ಡ ಮತ್ತು ಸ್ವಯಂ ಘೊಷಿತ ಬೆಳೆ ವಿವರಗಳೊಂದಿಗೆ ಆಗಸ್ಟ್ 11ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಮೀಪದ ಯಾವುದೇ ಬ್ಯಾಂಕ್‍ಗಳಿಗೆ, ಸಿಎಸ್‍ಸಿ ಕೆಂದ್ರಗಳಿಗೆ ಹಾಗೂ ಗ್ರಾಮ ಒನ್ ಕೆಂದ್ರಗಳಿಗೆ ಬೇಟಿ ನೀಡಿ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮ ಪಂಚಾಯತ ಮತ್ತು ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ವಿಮೆಗಾಗಿ ಅರ್ಜಿ ಸಲ್ಲಿಸುವಂತೆ ರೈತ ಬಾಂದವರಲ್ಲಿ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್