ವಿಜಯಪುರ, 31 ಜುಲೈ (ಹಿ.ಸ.) :
ಆ್ಯಂಕರ್ : ಮೈಸೂರು ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊ0ಡಿರುವ ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ 2025-26ನೇ ಸಾಲಿನ ಮಾಸ್ಟರ್ ಆಫ್ ವಿಜ್ಯುಯಲ್ ಆರ್ಟ್ಸ್ (ಎಂ.ವಿ.ಎ) ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎರಡು ವರ್ಷ ನಾಲ್ಕು ಸೆಮಿಸ್ಟರ್ ಪದವಿ ಇದಾಗಿದ್ದು, ಚಿತ್ರಕಲೆ ಹಾಗೂ ಶಿಲ್ಪಕಲೆ ವಿಭಾಗಗಳ ವಿಶೇಷ ಅಧ್ಯಯನಗಳಿರುತ್ತವೆ.
ಆಸಕ್ತ ಅಭ್ಯರ್ಥಿಗಳು ಪ್ರವೇಶಾತಿಗಾಗಿ ದಿನಾಂಕ: 07-08-2025ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ದಿನಾಂಕ: 11-08-2025ರ ಬೆಳಿಗ್ಗೆ 11ಗಂಟೆಗೆ ಅರ್ಹತೆ ಪರೀಕ್ಷೆಗೆ ಹಾಗೂ ಅದೇ ದಿನ ಮಧ್ಯಾಹ್ನ 2ಗಂಟೆಗೆ ಸಂದರ್ಶನವಿರುತ್ತದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ http://www.mysore.nic.in ಅಥವಾhttps://www.cavamysore.karnataka.gov.in ಹಾಗೂ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಕಚೇರಿ ದೂರವಾಣಿ ಸಂಖ್ಯೆ 0821-2438931ಗೆ ಸಂಪರ್ಕಿಸಬಹುದಾಗಿದೆ ಎಂದು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande