ಗಂಗಾವತಿ : ಐಟಿಐ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ
ಗಂಗಾವತಿ, 31 ಜುಲೈ (ಹಿ.ಸ.) : ಆ್ಯಂಕರ್ : ಗಂಗಾವತಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನಲ್ಲಿ ಅವಶ್ಯಕತೆ ಇರುವ ಅತಿಥಿ ಬೋಧಕರ ಹುದ್ದೆಗೆ ಸೂಕ್ತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಹುದ್ದೆಗಳು, ಅರ್ಹತೆ ವಿವರ: ಖಾಲಿ ಇರುವ ಏಳು ಎಲೆಕ್
ಗಂಗಾವತಿ : ಐಟಿಐ ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನ


ಗಂಗಾವತಿ, 31 ಜುಲೈ (ಹಿ.ಸ.) :

ಆ್ಯಂಕರ್ : ಗಂಗಾವತಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನಲ್ಲಿ ಅವಶ್ಯಕತೆ ಇರುವ ಅತಿಥಿ ಬೋಧಕರ ಹುದ್ದೆಗೆ ಸೂಕ್ತ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಹುದ್ದೆಗಳು, ಅರ್ಹತೆ ವಿವರ: ಖಾಲಿ ಇರುವ ಏಳು ಎಲೆಕ್ಟ್ರೀಷಿಯನ್ ಹುದ್ದೆಗೆ ಐಟಿಐ, ಎಟಿಎಸ್, ಡಿಇಇ ಅಥವಾ ಬಿಇ ಎಲೆಕ್ಟ್ರೀಷಿಯನ್ ವಿದ್ಯಾರ್ಹತೆ ಹೊಂದಿರಬೇಕು. ಒಂದು ಫಿಟ್ಟರ್ ಹುದ್ದೆಗೆ ಐಟಿಐ, ಎಟಿಎಸ್, ಡಿಎಂಇ ಅಥವಾ ಬಿಇ(ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. ಒಂದು ಮೆಕಾನಿಕ್ ಮೋಟರ್ ವೆಹಿಕಲ್ ಹುದ್ದೆಗೆ ಐಟಿಐ, ಎಟಿಎಸ್, ಡಿಪ್ಲೋಮಾ ಇನ್ ಅಟೋಮೊಬೈಲ್ಸ್ ಅಥವಾ ಡಿಎಂಇ ವಿದ್ಯಾರ್ಹತೆ ಹೊಂದಿರಬೇಕು. ಒಂದು ಟರ್ನರ್ ಹುದ್ದೆಗೆ ಐಟಿಐ, ಎಟಿಎಸ್, ಡಿಎಂಇ ಅಥವಾ ಬಿಇ(ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. ಎರಡು ವೇಲ್ಡರ್ ಹುದ್ದೆಗೆ ಐಟಿಐ, ಎಟಿಎಸ್, ಡಿಇಇ ಅಥವಾ ಬಿಇ(ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರಬೇಕು. ಈ ಎಲ್ಲಾ ಹುದ್ದೆಗೆಳಿಗೆ ನಿಗದಿತ ವಿದ್ಯಾರ್ಹತೆಹೊಂದಿಗೆ ಎರಡು ವರ್ಷಗಳ ಅನುಭವ ಹೊಂದಿರಬೇಕು.

ಆಸಕ್ತ ಅರ್ಹ ಅಭ್ಯರ್ಥಿಗಳು ಖುದ್ದಾಗಿ ಅಥವಾ ಅಂಚೆಮೂಲಕ ಆಗಸ್ಟ್ 11ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಂಗಾವತಿ ಮೊ.ಸಂ: 9448259832 ಇವರನ್ನು ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande