ಬಳ್ಳಾರಿಯಲ್ಲಿ ಹೆಣ್ಣು ಕರಡಿ ಜೀವಂತ ಸೆರೆ : ನಿಟ್ಟಿಸಿರುಬಿಟ್ಟ ನಾಗರಿಕರು
ಬಳ್ಳಾರಿ, 30 ಜುಲೈ (ಹಿ.ಸ.) ಆ್ಯಂಕರ್: ಬಳ್ಳಾರಿ ನಗರದ ಕೌಲ್‍ಬಜಾರ್, ಕಂಟೋನ್ಮೆಂಟ್, ಟಿಬಿ ಸ್ಯಾನಿಟೋರಿಯಂ ಪ್ರದೇಶಗಳಲ್ಲಿ ಎರೆಡು ದಿಗನಳಿಂದ ಆಗಾಗ್ಗೆ ಕಾಣಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿದ್ದ ಐದು ವರ್ಷದ ಹೆಣ್ಣು ಕರಡಿಯನ್ನು ಅರಣ್ಯ ಅಧಿಕಾರಿಗಳು ಬುಧವಾರ ನಸುಕಿನಲ್ಲಿ ಬಳ್ಳಾರಿ ಕೋಟೆ ಪ್ರದೇಶದಲ
ಬಳ್ಳಾರಿಯಲ್ಲಿ ಹೆಣ್ಣು ಕರಡಿ ಜೀವಂತ ಸೆರೆ : ನಿಟ್ಟಿಸಿರುಬಿಟ್ಟ ನಾಗರೀಕರು


ಬಳ್ಳಾರಿಯಲ್ಲಿ ಹೆಣ್ಣು ಕರಡಿ ಜೀವಂತ ಸೆರೆ : ನಿಟ್ಟಿಸಿರುಬಿಟ್ಟ ನಾಗರೀಕರು


ಬಳ್ಳಾರಿ, 30 ಜುಲೈ (ಹಿ.ಸ.)

ಆ್ಯಂಕರ್: ಬಳ್ಳಾರಿ ನಗರದ ಕೌಲ್‍ಬಜಾರ್, ಕಂಟೋನ್ಮೆಂಟ್, ಟಿಬಿ ಸ್ಯಾನಿಟೋರಿಯಂ ಪ್ರದೇಶಗಳಲ್ಲಿ ಎರೆಡು ದಿಗನಳಿಂದ ಆಗಾಗ್ಗೆ ಕಾಣಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿದ್ದ ಐದು ವರ್ಷದ ಹೆಣ್ಣು ಕರಡಿಯನ್ನು ಅರಣ್ಯ ಅಧಿಕಾರಿಗಳು ಬುಧವಾರ ನಸುಕಿನಲ್ಲಿ ಬಳ್ಳಾರಿ ಕೋಟೆ ಪ್ರದೇಶದಲ್ಲಿ ಸೆರೆ ಹಿಡಿದು, ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ರವಾನೆ ಮಾಡಿದ್ದಾರೆ.

ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ ಕೆ.ಎನ್. ಅವರು ಮಾಹಿತಿ ನೀಡಿದ್ದು, ಎರೆಡು ದಿನಗಳಿಂದ ನಗರದ ಟಿಬಿ ಸ್ಯಾನಿಟೋರಿಯಂ, ರೇಡಿಯೋಪಾರ್ಕ್ ಇನ್ನಿತರೆ ಸ್ಥಳಗಳಲ್ಲಿ ರಾತ್ರಿ ವೇಳೆಯಲ್ಲಿ ಕಾಣಿಸಿಕೊಂಡಿದ್ದ ಕರಡಿಯನ್ನು ಸೆರೆ ಹಿಡಿಯಲು ಸೋಮವಾರದಿಂದಲೇ ಪ್ರಯತ್ನಗಳು ನಡೆದಿದ್ದರೂ, ಕರಡಿ ಬಳ್ಳಾರಿ ಕೋಟೆ ಪ್ರದೇಶಕ್ಕೆ ಹೋಗಿ, ಗುಂಡುಗಳ ಮಧ್ಯೆ ವಿಶ್ರಾಂತಿ ಪಡೆದಿದ್ದು.

ಮಂಗಳವಾರ ಹಗಲು - ರಾತ್ರಿ ಕರಡಿಯ ಸೆರೆಗಾಗಿ ಅರಣ್ಯ ಇಲಾಖೆ ಮತ್ತು ಪಶು ಇಲಾಖೆಯ ಸಿಬ್ಬಂದಿಯು ಮಂಗಳವಾರ ರಾತ್ರಿ 8.30 ರಿಂದಲೇ ಬಳ್ಳಾರಿ ಕೋಟೆಯ ಸುತ್ತಲೂ ಗಸ್ತು ನಿರ್ವಹಿಸುತ್ತಿದ್ದಾಗ, ಕೋಟೆ ಪ್ರದೇಶದಿಂದ ಇಳಿದು ಬರುತ್ತಿದ್ದ ಕರಡಿಯನ್ನು ಬುಧವಾರ ನಸುಕಿನ 3 ಗಂಟೆ ಸುಮಾರಿಗೆ ಸೆರೆ ಹಿಡಿಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೀವಂತ ಸೆರೆ ಹಿಡಿದಿರುವ ಕರಡಿಗೆ ಪಶು ವೈದ್ಯರ ಪ್ರಾಥಮಿಕವಾಗಿ ಪರೀಕ್ಷಿಸಿ, ಮೈಕ್ರೋ ಚಿಪ್ ಅಳವಡಿಸಿ ಚಿಕಿತ್ಸೆ ಮತ್ತು ಪರೀಕ್ಷೆಗಾಗಿ ಕಮಲಾಪುರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಬುಧವಾರ ಕಳುಹಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಗಿರೀಶ್ ಕುಮಾರ್ ಡಿ.ಕೆ. ನೇತೃತ್ವದಲ್ಲಿ ಕರಡಿಯ ಸೆರೆ ಕಾರ್ಯಾಚರಣೆ ಎರೆಡು ದಿನಗಳ ಕಾಲ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande