ಯೂರಿಯಾ ಗೊಬ್ಬರಕ್ಕಾಗಿ ಗದಗ ಜಿಲ್ಲೆಯಲ್ಲಿ ಮುಂದುವರಿದ ರೈತರ ಪರದಾಟ
ಗದಗ, 30 ಜುಲೈ (ಹಿ.ಸ.) : ಆ್ಯಂಕರ್ :- ಸತತ ಮಳೆಯಿಂದ ತೇವಾಂಶ ಹೆಚ್ಚಾಗಿ ಗೋವಿನ ಜೋಳ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಈ ಹಿನ್ನಲೆಯಲ್ಲಿ, ಯೂರಿಯಾ ಗೊಬ್ಬರ ಅತ್ಯಗತ್ಯವಾಗಿದೆ. ಆದರೆ ಗದಗ ಜಿಲ್ಲೆಯಾದ್ಯಂತ ಯೂರಿಯಾ ಗೊಬ್ಬರ ಕೊರತೆ ಉಂಟಾಗಿ ರೈತರು ಹಗಲು ರಾತ್ರಿ ಎನ್ನದೆ ಸರತಿಸಾಲಿನಲ್ಲಿ ನಿಂತು ಪರದಾಡುವ
ಪೋಟೋ


ಗದಗ, 30 ಜುಲೈ (ಹಿ.ಸ.) :

ಆ್ಯಂಕರ್ :- ಸತತ ಮಳೆಯಿಂದ ತೇವಾಂಶ ಹೆಚ್ಚಾಗಿ ಗೋವಿನ ಜೋಳ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಈ ಹಿನ್ನಲೆಯಲ್ಲಿ, ಯೂರಿಯಾ ಗೊಬ್ಬರ ಅತ್ಯಗತ್ಯವಾಗಿದೆ. ಆದರೆ ಗದಗ ಜಿಲ್ಲೆಯಾದ್ಯಂತ ಯೂರಿಯಾ ಗೊಬ್ಬರ ಕೊರತೆ ಉಂಟಾಗಿ ರೈತರು ಹಗಲು ರಾತ್ರಿ ಎನ್ನದೆ ಸರತಿಸಾಲಿನಲ್ಲಿ ನಿಂತು ಪರದಾಡುವ ಸ್ಥಿತಿ ಉಂಟಾಗಿದೆ.

ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ಗದಗ ತಾಲೂಕಿನ ಕೃಷಿ ಸಹಕಾರಿ ಸಂಘಗಳ ಮುಂದೆ ರೈತರು ಕಿಲೋಮೀಟರ್ ಗಟ್ಟಲೆ ಸರತಿಯಲ್ಲಿ ನಿಂತು ಗೊಬ್ಬರಕ್ಕಾಗಿ ಪಾಳೆ ಹಾಕುತ್ತಿದ್ದಾರೆ.

ಆದರೆ ಕೆಲವರಿಗೆ ಮಾತ್ರ ಗೊಬ್ಬರ ದೊರೆಯುತ್ತಿರುವುದರಿಂದ, ಉಳಿದ ರೈತರ ಬಳಿ “ನಾಳೆ ಬನ್ನಿ” ಎಂಬ ಉತ್ತರವೇ ಸಿಗುತ್ತಿದೆ. ಇದರಿಂದ ಬೇಸತ್ತ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳಸಾಪುರ ಗ್ರಾಮದ ರೈತರ ಜಮೀನುಗಳು

ಗೋವಿನ ಜೋಳ ಹಳದಿ ಯಾಗುತ್ತಿರುವುದು ಕಂಡುಬಂದಿತು. “ಈಗ ಯೂರಿಯಾ ಸಿಂಪಡಿಸದಿದರೆ ಬೆಳೆ ಸಂಪೂರ್ಣ ನಾಶವಾಗಲಿದೆ” ಎಂದು ರೈತರು ಆತಂಕ ವ್ಯಕ್ತಪಡಿಸಿದರು. “ಒಂದು ಎಕರೆ ಜಮೀನಿಗೆ 15ರಿಂದ 20 ಸಾವಿರರೂಪಾಯಿ ವೆಚ್ಚವಾಗುತ್ತಿದೆ. ಈಗ ಮಳೆ ಬರುತ್ತಿದ್ದು, ತುರ್ತು ಗೊಬ್ಬರ ಅಗತ್ಯವಿದೆ” ಎಂಬದು ಅವರ ಕೂಗು.

ರೈತರು ಯೂರಿಯಾ ಜೊತೆಗೆ ಜಿಂಕ್ ಗೊಬ್ಬರ ಪಡೆಯಬೇಕಾಗುತ್ತಿದೆ. ಇದರಿಂದ ಹೆಚ್ಚಿನ ಖರ್ಚು ಹೊರೆಯಾಗುತ್ತಿದೆ. ಕೆಲವು ಕಡೆ ಮಾತ್ರ ಹೆಚ್ಚುವರಿ ಪ್ರಮಾಣದಲ್ಲಿ ಗೊಬ್ಬರ ವಿತರಣೆ ನಡೆಯುತ್ತಿದೆ. ಆದರೆ ಹಲವಾರು ರೈತರು ಕೈಯಲ್ಲಿ ಏನೂ ಇಲ್ಲದಂತಾಗಿ ಮರಳಿ ಹೋಗುತ್ತಿರುವುದು ಬೇಸರ ಮೂಡಿಸಿದೆ.

ಈ ಬಾರಿ ಜಿಲ್ಲೆಯಲ್ಲಿ ಜೋಳದ ಬಿತ್ತನೆ ವ್ಯಾಪಕವಾಗಿ ನಡೆದಿದ್ದು, ಯೂರಿಯಾ ಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ. ಆದರೆ ಕೃಷಿ ಇಲಾಖೆ ಪ್ರಾಥಮಿಕವಾಗಿ ಗೊಬ್ಬರ ದಾಸ್ತಾನು ಕಡಿಮೆ ಮಾಡಿಕೊಂಡಿರುವುದರಿಂದ ಈ ಹಾಹಾಕಾರ ಉಂಟಾಗಿದೆ. ರೈತರು ಕೂಡಲೇ ಸಮರ್ಪಕ ಹಾಗೂ ಸಮವಂಚಿತ ರೀತಿಯಲ್ಲಿ ಗೊಬ್ಬರ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande