ವಿಜಯಪುರ, 30 ಜುಲೈ (ಹಿ.ಸ.) :
ಆ್ಯಂಕರ್ : ಸೌಜನ್ಯ ಕೊಲೆ ಪ್ರಕರಣ ಸೌಜನ್ಯ ಸಾವಿಗೆ ನ್ಯಾಯಸಿಗಬೇಕು. ಈಗಾಗಲೇ ಕೋರ್ಟ್ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಕಮುನಿಷ್ಠರು,ಕ್ರಿಶ್ಚಯನ್ ರ ಈ ಪ್ರಕರಣದ ಲಾಬಿ ನಡೆಯುತ್ತಿದೆ ಎಂಬ ಸಂಶಯ ಬರುತ್ತಿದೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ ಹೇಳಿದರು.
ಬಾಗಲಕೋಟೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿಯವರೆಗೆ ಬೇರೆ ಬೇರೆ ಸಾಕ್ಷ್ಯಿಗಳಿಗಳಿವೆ ಎಂದು ಹೇಳವುತ್ತಿರುವವರು ಬಹಿರಂಗ ಪಡಿಸುತ್ತಿಲ್ಲ.ಯಾಕೆ ಕೋರ್ಟ್ ಗೆ ಹೋಗುತ್ತಿಲ್ಲ ಎಂಬ ಪ್ರಶ್ನೆ ಬರುತ್ತದೆ. ಇನ್ನು ನೇರವಾಗಿ ಹೆಗಡೆ, ಧರ್ಮಸ್ಥಳ ಮಂಜುನಾಥ,ಅಣ್ಣಪ್ಪದೇವರು ಎಂದು ಹೇಳಿಕೆ ಕೊಡುತ್ತಿರುವುದು ಸರಿಯಲ್ಲ ಎಂದರು.
ಸೌಜನ್ಯ ಹೋರಾಟಗಾರರಿಗೆ ನನ್ನ ಬೆಂಬಲ ವಿದೆ. ಸರಕಾರ ಎಸ್ ಐಟಿ ನೇಮಿಸಿದೆ. ಮಹಿಳೆಯರ ದೌರ್ಜನ್ಯಗಳು ಸಾಕಷ್ಟಿವೆ, ಹುಬ್ಬಳಿ ಸ್ನೇಹಾ ಹಿರೇಮಠ ಹಾಡ ಹಗಲೇ ಕೊಲೆ ಆಯಿತು. ಅದಕ್ಕೆ ಎಸ್ಐಟಿ ನಿಮಿಸಬೇಕಿತ್ತು.ಕೊಲೆಗಾರರಿಗೆ ಜಾಮೀನುಗಳು ಸಿಗುತ್ತಿದೆ. ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿದೆ ಎಂದು ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande