ಕುಡತಿನಿ/ ಸಂಡೂರು, , 28 ಜುಲೈ (ಹಿ.ಸ.) :
ಆ್ಯಂಕರ್ : ಕುಡತಿನಿ, ವೇಣಿವೀರಾಪುರ, ಇನ್ನಿತರೆ ಗ್ರಾಮಗಳ ಭೂಮಿಯನ್ನು ಕೆಐಎಡಿಬಿ ಸ್ವಾಧೀನ ಮಾಡಿಕೊಂಡು, ಬೃಹತ್ ಕೈಗಾರಿಕೆಗಳಿಗೆ ನೀಡಿರುವುದನ್ನು ಖಂಡಿಸಿ ಸಂಸದ ಇ. ತುಕಾರಾಂ ಅವರ ಮನೆಯ ಮುಂದೆ ಆಗಸ್ಟ್ 8ರ ಶುಕ್ರವಾರ ಪ್ರತಿಭಟನೆ ನಡೆಸಲು ಕುಡತಿನಿ ಭೂ ಸಂತ್ರಸ್ತ ಹೋರಾಟಗಾರರು ನಿರ್ಧರಿಸಿದ್ದಾರೆ.
ಜೆ. ಸತ್ಯಬಾಬು ಅವರು ಈ ಮಾಹಿತಿ ನೀಡಿದ್ದು, ಕರ್ನಾಟಕ ಪ್ತಾಂತ ರೈತ ಸಂಘ, ಸೆಂಟರ್ ಆಪ್ ಟ್ರೆಡ್ ಯೂನಿಯನ್ಸ್ ಹಾಗು ಕನ್ನಡ ಪರ ಸಂಘಟನೆಗಳು ಜಂಟಿ ಸಮಿತಿಯು ಪ್ರತಿಭಟನೆಯನ್ನು ಆಗಸ್ಟ್ 7 ರಂದು ಕುಡತಿನಿನಿಂದ ಪಾದಯಾತ್ರೆ ಮೂಲಕ ಸಂಡೂರು ತಲುಪಿ, ಆಗಸ್ಟ್ 8ರ ಶುಕ್ರವಾರ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ.
ಕಳೆದ 15 ವರ್ಷಗಳಿಂದ ಬೃಹತ್ ಕೈಗಾರಿಕೆಗಳಿಗಾಗಿ ಭೂ ಸ್ವಾಧೀನವಾಗಿದ್ದರೂ, ಕೈಗಾರಿಕೆಗಳೂ ಪ್ರಾರಂಭವಾಗಿಲ್ಲ, ಭೂ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗಗಳೂ ಸಿಕ್ಕಿಲ್ಲ. ಅಲ್ಲದೇ, ನ್ಯಾಯಯುತ ಬೆಲೆಯನ್ನು ನೀಡಲು ಕೋರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
950 ದಿನಗಳಿಂದಲೂ ಕುಡತಿನಿಯಲ್ಲಿ ಸತ್ಯಾಗ್ರಹ ನಡೆದಿದೆ. ಸರ್ಕಾರ, ಜನಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಸ್ವಾಧೀನ ಮಾಡಿಕೊಂಡಿರುವ ಸ್ಥಳದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಭೂಮಿಗೆ ನ್ಯಾಯಯುತ ಬೆಲೆಯನ್ನು ನೀಡಬೇಕು ಎಂದು ಸಂಸದರಲ್ಲಿ ಕೋರಲಾಗುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್