ಜೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣ ಬಾಜಪೇಯಿ ಅಧಿಕಾರ ಸ್ವೀಕಾರ
ಬಳ್ಳಾರಿ, 28 ಜುಲೈ (ಹಿ.ಸ.) : ಆ್ಯಂಕರ್ : ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣ ಬಾಜಪೇಯಿ (ಐಎಎಸ್) ಅವರು ನೇಮಕಗೊಂಡಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರವೀಂದ್ರ ಕರಲಿಂಗಣ
ಜೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ  ಕೃಷ್ಣ ಬಾಜಪೇಯಿ ಅಧಿಕಾರ ಸ್ವೀಕಾರ


ಬಳ್ಳಾರಿ, 28 ಜುಲೈ (ಹಿ.ಸ.) :

ಆ್ಯಂಕರ್ : ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಕೃಷ್ಣ ಬಾಜಪೇಯಿ (ಐಎಎಸ್) ಅವರು ನೇಮಕಗೊಂಡಿದ್ದು, ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರವೀಂದ್ರ ಕರಲಿಂಗಣ್ಣವರ್ (ಕೆಎಎಸ್) ಅವರು ವರ್ಗಾವಣೆಗೊಂಡಿದ್ದು, ಈ ಸ್ಥಾನಕ್ಕೆ ಕೃಷ್ಣ ಬಾಜಪೇಯಿ ಅವರನ್ನು ನೇಮಕ ಮಾಡಲಾಗಿದೆ. ಕೃಷ್ಣ ಬಾಜಪೇಯಿ ಅವರು ಈ ಹಿಂದೆ ಕಲಬುರಗಿ ಪ್ರಾದೇಶಿಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande